

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಸಪ್ತಾಪುರ ಬಳಿಯ ಸೈನಿಕ ಮೆಸ್ ಮಾಲೀಕ ಹಾಗೂ ಕಾನೂನು ವಿದ್ಯಾರ್ಥಿ ರಾಮಪ್ಪ ನಿಪ್ಪಾಣಿ ಮೇಲೆ ಉಪನಗರ ಠಾಣೆ ಪೊಲೀಸರು ನಡೆಸಿ ಹಲ್ಲೆ ಖಂಡಿಸಿ ಮಾಜಿ ಸೈನಿಕರ ಸಂಘ ಹಾಗೂ ಕಾನೂನು ವಿದ್ಯಾರ್ಥಿಗಳ ಸಂಘದಿ0ದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕೋರ್ಟ್ ಆವರಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಮಾಜಿ ಸೈನಿಕರು ಹಾಗೂ ಕಾನೂನು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಜಮಾಯಿಸಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಾನೂನು ವಿದ್ಯಾರ್ಥಿಯಾಗಿರುವ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಮೇಲೆ ಉಪನಗರ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ದೌರ್ಜನ್ಯ ನಡೆದಿದೆ. ಎಎಸ್‌ಐ ಹಾಗೂ ಕಾನ್‌ಸ್ಟೇಬಲ್ ಅವರನ್ನು ಮಾತ್ರ ಅಮಾನತು ಮಾಡಲಾಗಿದೆ. ಅವಽ ಮೀರಿ ಮೆಸ್ ನಡೆಸುತ್ತಿದ್ದರೆ ನೋಟಿಸ್ ಅಥವಾ ಇನ್ನಿತರ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಘಟನೆಯಲ್ಲಿ ರಾಮಪ್ಪ, ಅವರ ಪತ್ನಿ, ಇಬ್ಬರು ಅಪ್ರಾಪ್ತರ ಮೇಲೂ ಹಲ್ಲೆ ಮಾಡಲಾಗಿದೆ. ಇದು ಪೂರ್ವನಿಯೋಜಿತ ವೈಷಮ್ಯದ ಕೃತ್ಯವಾಗಿದೆ. ಎಫ್‌ಐಆರ್ ದಾಖಲಾಗುವ ಮೊದಲೇ ಮೆಸ್‌ನಲ್ಲಿದ್ದ ಸಿಸಿಟಿವಿ, ಡಿವಿಆರ್ ಹಾಗೂ 4 ಮೊಬೈಲ್‌ಗಳನ್ನು ಪೊಲೀಸರು ಏಕೆ ಒಯ್ದರು? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ತಾಯಿ, ಪತ್ನಿ, ಸಂಬ0ಽಕರು ಉಪಸ್ಥಿತರಿದ್ದರು. ನಗರದ ವಿವಿಧ ಕಾನೂನು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು, ಧಾರವಾಡ ಹಾಗೂ ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳ ಮಾಜಿ ಸೈನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗಾಯಾಳುಗಳ ಫೋಟೊಗಳನ್ನು ಭಿತ್ತಿಪತ್ರ ಮಾಡಿ ಪ್ರದರ್ಶಿಸಲಾಯಿತು.
* ಜಿಲ್ಲಾಧಿಕಾರಿ ಆಗಮನಕ್ಕೆ ಪಟ್ಟು: ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಬಂದರೂ ಒಪ್ಪದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಯೇ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಜಿಲ್ಲಾಧಿಕಾರಿ ರಜೆ ಇದ್ದಾರೆ ಎಂದು ಪೊಲೀಸರು ಮನವರಿಕೆ ಮಾಡಿದ ನಂತರ ಮನವಿ ನೀಡಿ ಗೃಹಸಚಿವರಿಗೆ ರವಾನಿಸಿದರು.