

ಬೆಂಗಳೂರು: ಚಾಲಕರಿಗೆ ಮರಣ ಶಾಸನವಾಗಿರುವ ಹಿಟ್ ಆ್ಯಂಡ್ ರನ್-ಭಾರತೀಯ ನ್ಯಾಯ ಸಂಹಿತೆ-೨೦೨೩ ವಾಪಾಸಾತಿ, ಬೈಕ್ ಟ್ಯಾಕ್ಸಿಗಳ ನಿಷೇಧ, ದುಬಾರಿ ದಂಡಗಳ ವಾಪಾಸಾತಿ ಹಾಗೂ ಚಾಲಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚನೆಗಾಗಿ ಒತ್ತಾಯಿಸಿ ಸಾರಿಗೆ ಚಾಲಕರ ಸಂಘಟನೆಗಳ ಒಕ್ಕೂಟದ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ೆಡರೇಶನ್ ಆ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ ಯೂನಿಯನ್‌ನ ಅಧ್ಯಕ್ಷ ಬಿ.ವಿ. ರಾಘವೇಂದ್ರ ಮಾತನಾಡಿ, ಸರ್ಕಾರವು ರಸ್ತೆ ಸಾರಿಗೆ ಚಾಲಕರನ್ನು ಅಮಾನುಷವಾಗಿ ಶಿಕ್ಷಿಸುವ ಕ್ರಮಕ್ಕೆ ಮುಂದಾಗಿದೆ. ೨೦೨೩ ಡಿಸೆಂಬರ್ ೨೧ರಂದು ಭಾರತೀಯ ನ್ಯಾಯ ಸಂಹಿತೆ-೨೦೨೩ ಅನ್ನು ಸಂಸತ್ತು ಅಂಗೀಕರಿಸಿದೆ. ಈ ಮೊದಲು ಐಪಿಸಿ ಸೆಕ್ಷನ್ ೩೦೪ ಎ ಅಡಿಯಲ್ಲಿ ಇದನ್ನು ಅಜಾಗರೂಕತೆ ಕಾರಣಕ್ಕೆ ಸಂಭವಿಸಿದ ಸಾವು ಎಂದು ವ್ಯಾಖ್ಯಾನಿಸಲಾಗಿತ್ತು. ಯಾವುದೇ ದುಡುಕಿನ ಮತ್ತು ಅಜಾಗರೂಕ ಕೃತ್ಯದಿಂದ ಯಾವುದೇ ವ್ಯಕ್ತಿಯ ಸಾವಿಗೆ ಯಾರೇ ಕಾರಣರಾದರೂ ಅದು ದಂಡಾರ್ಹ ಕೊಲೆಯಲ್ಲದಿದ್ದಲ್ಲಿ ಎರಡು ವರ್ಷಗಳ ಜೈಲು ಅಥವಾ ದಂಡ ಅಥವಾ ಎರಡನ್ನು ವಿಧಿಸಿ ಶಿಕ್ಷಿಸಬಹುದಾಗಿತ್ತು. ಅದರಲ್ಲಿ ಚಾಲನೆ ಎಂಬುದಿರಲಿಲ್ಲ. ಈಗ ಐಪಿಸಿಗೆ ತಿದ್ದುಪಡಿ ತರುವ ನೆಪದಲ್ಲಿ ದುಡುಕಿನ ಮತ್ತು ಅಜಾಗರೂಕ ಚಾಲನೆ ಶಬ್ದಗಳನ್ನು ಸೇರಿಸಲಾಗಿದೆ. ಈ ಮೂಲಕ ಚಾಲಕರನ್ನು ೧೦ ವರ್ಷ ಜೈಲಿಗೆ ಹಾಕಲು ಮತ್ತು ೭ ಲಕ್ಷ ರೂ.ಗಳವರೆಗೆ ದಂಡ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದರಿಂದ ಕೇವಲ ವಾಣಿಜ್ಯ ಮತ್ತು ಪ್ರಯಾಣಿಕರ ಚಾಲಕರಿಗೆ ಮಾತ್ರವಲ್ಲದೇ ಸಾರ್ವಜನಿಕರು ಕೂಡ ಇದರಿಂದ ಭಾಧಿತರಾಗುತ್ತಾರೆ. ದ್ವಿಚಕ್ರ, ತ್ರಿಚಕ್ರ ವಾಹನಗಳು, ಕಾರುಗಳು, ಲಾರಿ, ಟ್ರಕ್, ಬಸ್ ಮುಂತಾದ ಎಲ್ಲಾ ವಾಹನಗಳ ಚಾಲಕರನ್ನು ನಿರಂತರ ಭೀತಿಯೊಳಗೆ ಬದುಕುವಂತೆ ಇದು ಮಾಡುತ್ತದೆ. ಅಪಘಾತಗಳು ಕೇವಲ ಚಾಲಕರಿಂದಲೇ ಸಂಭವಿಸುತ್ತದೆ ಎನ್ನುವಂತೆ ಈ ಸಂಹಿತೆಯನ್ನು ರೂಪಿಸಲಾಗಿದೆ. ಅಪಘಾತಗಳನ್ನು ಕ್ರಿಮಿನಲ್ ಅಪರಾಧ ಕೃತ್ಯಕ್ಕೆ ಸಮ ಎಂದು ಮಾಡಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಾಮಾನ್ಯ ಚಾಲಕರು ವಾಹನಗಳನ್ನು ಓಡಿಸುವುದೇ ಕಷ್ಟವಾಗಲಿದೆ ಎಂದರು.
ಬೇಡಿಕೆಗಳೇನು?