ಹಿಂದು ಪರ ಸಂಘಟನೆಗಳಿಂದ ಪ್ರತಿಭಟನೆ

Fist hand power logo. Protest strong fist raised fight icon
Fist hand power logo. Protest strong fist raised fight icon, rebel illustration
Published on

ಮೈಸೂರು: ರಾಜ್ಯದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟವನ್ನು ಖಂಡಿಸಿ ಮತ್ತು ಮುಸ್ಲಿಂ ಸಂಘಟನೆಯ ಕಾರ್ಯಕರ್ತರನ್ನು ಗಡಿಪಾರು ಮಾಡಲು ಒತ್ತಾಯಿಸಿ ಸೋಮವಾರ ಹಿಂದು ಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.

ಸುಮಾರು 150 ಜನರು ನಗರದ ನಜರ್‌ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದೇ ವೇಳೆ ಸರ್ಕಾರದ ವಿರುದ್ಧ ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಆಂಧ್ರಪ್ರದೇಶ ಒಬ್ಬ ಕ್ರಿಶ್ಚಿಯನ್ ಕೈಗೆ ಸಿಕ್ಕ ಕಾರಣ ಲಡ್ಡುನಲ್ಲಿ ಹಂದಿ ಮತ್ತು ದನದ ಕೊಬ್ಬು ಹಾಕಿದ್ದಾರೆ. ಪವಿತ್ರವಾದ ತಿರುಪತಿ ಲಡ್ಡುವಿಗೆ ಹಂದಿ, ದನದ ಕೊಬ್ಬು, ಮೀನಿನ ಎಣ್ಣೆ ಹಾಕುತ್ತಾರೆ ಎಂದರೆ ಇವರ ಮನಸ್ಥಿತಿ ಲೆಕ್ಕ ಹಾಕಿ. ಇದು ಕರ್ನಾಟಕದಲ್ಲಿ ಶುರುವಾಗುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.

ಈದ್ ಮೆರವಣಿಗೆ ಮೇಲೆ ಒಬ್ಬ ಹಿಂದುವಾದರೂ ಕಲ್ಲು ಹಾಕಿದ್ದಾನಾ? ಹಿಂದುಗಳ ಪವಿತ್ರ ಭೂಮಿ ಭಾರತ, ಮುಸ್ಲಿಮರಿಗೆ ಮೆಕ್ಕಾ ಪವಿತ್ರಭೂಮಿ. ಕ್ರಿಶ್ಚಿಯನ್‌ರಿಗೆ ರೋಮ್. ಹೀಗಾಗಿ ಈ ಹಿಂದು ಭೂಮಿ ಮೇಲೆ ಅಶಾಂತಿ ನಿರ್ಮಾಣ ಮಾಡುತ್ತಾರೆ ಎಂದರು.

ನ್ಲೂಕಿಯರ್ ಬಾಂಬ್ ಮಾಡಿದ ಹಿಂದುಗಳಿಗೆ ಪೆಟ್ರೋಲ್ ಬಾಂಬ್ ಮಾಡಲು ಸಾಧ್ಯವಿಲ್ಲ ಅಂತೀರಾ? ಗುಜರಿ, ಟಾಂಗಾ ಮುಸ್ಲಿಮರು ಮಾಡುವ ಪೆಟ್ರೋಲ್ ಬಾಂಬ್ಗೆ ಹೆದರುತ್ತೇವಾ? ಹಿಂದುಗಳು ರೊಚ್ಚಿಗೆದ್ದರೆ ಮುಸ್ಲಿರು ಉಳಿಯುತ್ತಾರಾ? ಎಂದು ಪ್ರಶ್ನಿಸಿದರು. ಹಿಂದುಗಳು ಶಾಂತಿ ಪ್ರಿಯರು ಎಂಬ ಪಟ್ಟ ಸಾಕು. ಧರ್ಮ ರಕ್ಷಣೆಗೆ ಎಲ್ಲ ಹಿಂದುಗಳು ಮುಂದಾಗಬೇಕು ಎಂದು ಕರೆ ನೀಡಿದರು.

ಶಹಪುರದಲ್ಲಿ ಗಣಪತಿ ಮೆರವಣಿಗೆ ಸಮಯದಲ್ಲಿ ಅಲಂಕಾರ ಮಾಡಿರಲಿಲ್ಲ. ಏಕೆಂದರೆ ಮುಸಲ್ಮಾನ ನಗರಸಭಾ ಅಧ್ಯಕ್ಷ ಆಗಿದ್ದ. ಆದರೆ ಮಿಲಾದ್‌ನಲ್ಲಿ ಅಲಂಕಾರ ಮಾಡಿದ್ದರು.
ಚಾಮರಾಜಪೇಟೆಯಲ್ಲಿ ಡಿಜೆಗೆ ಅವಕಾಶ ಕೊಟ್ಟಿಲ್ಲ ಎಂದು ಗಲಾಟೆ ನಡೆಯುತ್ತಿದೆ. ತುಮಕೂರಿನ ಗಣೇಶೋತ್ಸವ ಸಮಯದಲ್ಲಿ ಪುನೀತ್ ಕೆರೆಹಳ್ಳಿಗೆ ನಿರ್ಬಂಧ ಹೇರಲಾಯಿತು. ಹೀಗೆ ಎಲ್ಲ ಕಡೆ ಅವ್ಯಾಹತ ಗಲಾಟೆ ನಡೆಯುತ್ತಿದೆ. ನಾಗಮಂಗಲದಲ್ಲಿ ಪ್ರಾರಂಭವಾದ ಗಲಾಟೆ ಕಿಚ್ಚಿನಂತೆ ಹರಡುತ್ತಿದೆ. ಗಣೇಶೋತ್ಸವದಲ್ಲಿ ಒಂದಲ್ಲ ಒಂದು ತಗಾದೆ ಎತ್ತಿ ಸಂಪೂರ್ಣವಾಗಿ ಹತ್ತಿಕ್ಕುವ ಕೆಲಸ ನಡೆಯುತ್ತಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀರು, ಅನ್ನ ಕೊಟ್ಟರು. ಅದೇ ನಾಲ್ವಡಿ ಅವರು ಸ್ಥಾಪಿಸಿದ ವಿಶ್ವವಿದ್ಯಾಲಯದಲ್ಲಿ ಓದಿದ ಸಿದ್ದರಾಮಯ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಮಾಡಲಿಲ್ಲ. ಟಿಪ್ಪು ಸುಲ್ತಾನ್ ಜಯಂತಿ ಮಾಡಿದರು ಎಂದು ದೂರಿದರು.
ಒಕ್ಕಲಿಗ, ಬ್ರಾಹ್ಮಣ, ಕುರುಬ, ಲಿಂಗಾಯತ ಎಂಬ ಜಾತಿ ಮನಸ್ಥಿತಿಯನ್ನು ಬಿಟ್ಟು ಹಿಂದುಗಳು ಒಟ್ಟಾಗಿ. ಇಂತಹ ದಾಳಿಗಳನ್ನು ನೋಡಿಯಾದರೂ ಹಿಂದುಗಳು ತಮ್ಮ ಜಾತಿಯನ್ನು ಬಿಟ್ಟು ಒಗ್ಗಟ್ಟಾಗಲಿ ಎಂದು ಹೇಳಿದರು.
ವಕೀಲ ಕೇಶವಮೂರ್ತಿ, ಮಾಜಿ ಶಾಸಕ ಎಲ್.ನಾಗೇಂದ್ರ, ಸಂಚಾಲಕ ಸಂಜಯ್, ಪ್ರೇಮ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net