ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

Published on

ಅರಕಲಗೂಡು: ಬೆಲೆ ಏರಿಕೆ ಖಂಡಿಸಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಬುಧವಾರ ತಾಲೂಕಿನ ಸಿದ್ದಾಪುರ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದರು.

ಸೇನೆ ರಾಜ್ಯಾಧ್ಯಕ್ಷ ರಾಘವೇಂದ್ರಗೌಡ ನೇತೃತ್ವದಲ್ಲಿ ರಸ್ತೆ ಮಧ್ಯೆ ನಿಂತು ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು ಬೆಲೆ ಏರಿಕೆ ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಘವೇಂದ್ರಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ಸರ್ಕಾರ ಒಂದಿಲ್ಲೊಂದು ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ಹಾಲು, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಲೇ ಇದೆ. ಇದರಿಂದ ಜನಾಸಾಮನ್ಯರಿಗೆ ಅಗತ್ಯವಾದ ವಸ್ತುಗಳು ಕೈಗೆಟುಕದಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಿ ಬೆಲೆ ಏರಿಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸೇನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಧುಶ್ರೀ, ರೈತರ ಘಟಕ ಜಿಲ್ಲಾ ಅಧ್ಯಕ್ಷ ಸುದೀಪ್‌ಗೌಡ, ಉದ್ಯಮ ಘಟಕ ಜಿಲ್ಲಾ ಅಧ್ಯಕ್ಷ ಮಣಿ ಮಲ್ಲೇಶ್, ತಾಲೂಕು ಅಧ್ಯಕ್ಷರಾದ ಗಿರೀಶ್‌ಗೌಡ, ಮೆಕ್ಯಾನಿಕ್ ರಮೇಶ್, ಸಿವಿತೋಟ ಪ್ರಕಾಶ್‌ಗೌಡ, ಆನಂದ್ ಆಚಾರ್, ಅನಿತಾ ಆಚಾರ್, ನಿತೇಶ್‌ಗೌಡ ಹೋಟೆಲ್ ರೇವಣ್ಣ ಸಿಗೋಡು, ವಾಸು ನಂಜೇಗೌಡ, ಗೋಪಾಲ್ ಆಚಾರ್, ಕರಿಯಪ್ಪ ಪಾಪಾಚಾರಿ, ಸ್ವಾಮಿಗೌಡ್ರು ದರ್ಶನ್, ಶಶಾಂಕ್, ಸುದರ್ಶನ್, ಫಯಾಜ್, ನಾಗೇಶ್, ನಾಗಣ್ಣ, ಪ್ರದೀಪ್, ಬೇಕರಿ ಯೋಗೇಶ್, ಸಿಮೆಂಟ್ ಚಿದಾನಂದ, ರವಿ ಆಚಾರ್, ಕೃಷ್ಣೇಗೌಡ, ಸುನಿಲ್ ಇದ್ದರು.

ಅರಕಲಗೂಡಿನಲ್ಲಿ ತಾಲೂಕಿನ ಸಿದ್ದಾಪುರ ಗೇಟ್‌ನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net