

ತೇರದಾಳ: ಶ್ರೀ ರಾಮಸೇನೆ ತಾಲೂಕು ಘಟಕದಿಂದ ಶುಕ್ರವಾರ ಹುಬ್ಬಳ್ಳಿಯ ನೇಹಾ ಹತ್ಯೆ ಖಂಡಿಸಿ ತೇರದಾಳದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಸ್ಥಳೀಯ ಗಂಗಾಧರ ಮಠದಿಂದ ಪ್ರಾರಂಭಗೊಂಡ ಮೆರವಣಿಗೆ ಅಲ್ಲಮಪ್ರಭು ದ್ವಾರಬಾಗಿಲು, ನಾಡಕಚೇರಿ ಮಾರ್ಗವಾಗಿ ಬಸ್ ನಿಲ್ದಾಣದವರೆಗೆ ನಡೆಯಿತು.
ಕಾರ್ಯಕರ್ತರು ನೇಹಾ ಹತ್ಯೆಗೆ ನ್ಯಾಯ ಸಿಗುವಂತೆ ಹಾಗೂ ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ, ಘೋಷಣೆ ಕೂಗಿದರು.
ಮಂಜುನಾಥ ಜಮಖಂಡಿ ಮಾತನಾಡಿ, ನೇಹಾ ಹತ್ಯೆಯಿಂದ ರಾಜ್ಯದಲ್ಲಿ ಹಿಂದು ಮಹಿಳೆಯರ ರಕ್ಷಣೆಗೆ ಧಕ್ಕೆ ಬಂದಂತಾಗಿದೆ. ಲವ್ ಜಿಹಾದಿ ಮನಸ್ಥಿತಿಯ ಮತಾಂದ್ ಫಯಾಜನು ಐಎಸ್‌ಐ ಉಗ್ರ ತರಬೇತಿ ಪಡೆದಿರುವ ಮಾದರಿಯಲ್ಲಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದರು.
ಸದಾಶಿವ ಗೊಡ್ಸೆ, ಆನಂದ ಚಮಕೇರಿ, ಸಂಜು ರಸಾಳ, ಪ್ರಕಾಶ ಮನ್ಮಿ, ರಾಮಣ್ಣ ಹಿಡಕಲ್, ಸದಾಶಿವ ಹೊಸಮನಿ, ಸಂತೋಷ ಅಕ್ಕೆನ್ನವರ, ಸಿದ್ದು ಅಮ್ಮಣಗಿ, ರಾಮು ಗಾಡಿವಡ್ಡರ, ಗುರು ಹಿಡಕಲ್, ಪುಷ್ಪಲತಾ ಬಂಕಾಪುರ ಇದ್ದರು.
ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ ಅವರಿಗೆ ರಾಜ್ಯಪಾಲರಿಗೆ ಬರೆಯಲಾದ ಪತ್ರ ಸಲ್ಲಿಸಲಾಯಿತು.