ಒಳಮೀಸಲಾತಿ ವಿರೋಧಿಸಿ ಪ್ರತಿಭಟನೆ 30ಕ್ಕೆ

saina bhagat
ಸೈನಾ ಭಗತ್ ಸ್ವಾಮೀಜಿ
Published on

ಶಿಕಾರಿಪುರ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತಂದು ಒಳಮೀಸಲಾತಿ ನಿಗದಿಗೊಳಿಸಿದರೆ ನಮ್ಮ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ತಾಲೂಕಿನ ಸಾಲೂರು ಬಂಜಾರ ಮಠದ ಸೈನಾ ಭಗತ್ ಸ್ವಾಮೀಜಿ ಹೇಳಿದರು.

ಭೋವಿ, ಕೊರಚ, ಕೊರಮ, ಬಂಜಾರ ಸೇರಿ 63 ಜಾತಿಗಳಿಗೆ ಶೇ.5 ಮೀಸಲಾತಿ ನಿಗದಿಗೊಳಿಸಲಾಗಿದೆ. ಇದರಿಂದ ನಮ್ಮ ಸಮಾಜಕ್ಕೆ ತೀರ ಅನ್ಯಾಯವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಒಳಮೀಸಲಾತಿಯನ್ನು ರದ್ದುಗೊಳಿಸಿ ಪೂರ್ವದಲ್ಲಿ ಇದ್ದಂತೆಯೇ ಮೀಸಲಾತಿ ಒದಗಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಎಲ್ಲ 63 ಜಾತಿಯ ಜನರು ಸೇರಿ ಆ.30ರಂದು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು. ಶಾಂತಿಯುತವಾಗಿ ನಡೆಯುವ ಈ ಹೋರಾಟಕ್ಕೆ ತಾಲೂಕಿನ ಬಂಜಾರ ಸಮಾಜ ಸೇರಿ 63 ಜಾತಿಗಳ ನಾಗರಿಕರು ಆಗಮಿಸಬೇಕು ಎಂದು ಮನವಿ ಮಾಡಿದರು.

ಪ್ರಮುಖರಾದ ಗಂಗಾನಾಯ್ಕ, ಆನಂದ ನಾಯಕ್, ವಿಜಯನಾಯ್ಕ, ಗುರುಮೂರ್ತಿ ನಾಯ್ಕ, ಚಂದ್ರು ಎಸ್. ನಾಯ್ಕ್, ಮಂಜುನಾಯ್ಕ, ಬಸವರಾಜನಾಯ್ಕ, ಕುಮಾರನಾಯ್ಕ, ಜಗದೀಶ್‌ನಾಯ್ಕ, ರಾಜುನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net