ಬಿಜೆಪಿ, ಜೆಡಿಎಸ್ ವಿರುದ್ಧ ಪ್ರತಿಭಟನೆ

cong
Published on

ಮೈಸೂರು: ಸಮುದಾಯದ ಮುಖಂಡರಾದ ಬಿ.ಸುಬ್ರಹ್ಮಣ್ಯ ಅವರ ನೇತತ್ವದಲ್ಲಿ ಶನಿವಾರ ಸಿದ್ದಾರ್ಥನಗರದಲ್ಲಿರುವ ಕನಕ ಭವನದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಶೋಷಿತ ಸಮುದಾಯಗಳ ಮುಖಂಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವಾನಿಗಳು ಒಗ್ಗೂಡಿ ಸಭೆ ನಡೆಸಲಾಯಿತು.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ವಿರುದ್ಧ ಕುತಂತ್ರ ಮತ್ತು ಸುಳ್ಳು ಆರೋಪ ವಾಡುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಮೈಸೂರು ನಗರದಲ್ಲಿ ಬಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು.
ಆ.9ರಂದು ಮೈಸೂರಿನಲ್ಲಿ ನಡೆಯುವ ಬಹತ್ ಸವಾವೇಶಕ್ಕೆ ಬೆಂಬಲ ಸೂಚಿಸುವ ನಿರ್ಧಾರ ಕೈಗೊಳ್ಳಲಾಯಿತು. ಅಂದು ಬೆಳಗ್ಗೆ 10.30ಕ್ಕೆ ಕುರಬರಳ್ಳಿ ಸಂಗೊಳ್ಳಿ ರಾಯಣ್ಣ ವತ್ತದಿಂದ, ಬಹತ್ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸುವ ಕುರಿತು ತೀರ್ವಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ವಾಜಿ ಶಾಸಕ ಸೋಮಶೇಖರ್, ಕಾಂಗ್ರೆಸ್ ಹಿರಿಯ ಮುಖಂಡರಾದ ಆರ್ ಮೂರ್ತಿ, ಎಂ.ಲಕ್ಷ್ಮಣ್ , ಬಿ.ಜೆ.ವಿಜಯಕುವಾರ್, ಶಿವಣ್ಣ , ಆಯೂಬ್ ಖಾನ್, ಆರೀಫ್ ಹುಸೇನ್, ಪುಷ್ಪಲತಾ ಚಿಕ್ಕಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net