

ವಿಜಯವಾಣಿ ಸುದ್ದಿಜಾಲ ಕೋಲಾರ/ಮಾಲೂರು
ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಮೇಲಾಧಿಕಾರಿಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದ ಪೌರಕಾರ್ಮಿಕರನ್ನು ನಿಂದಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ, ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಪುರಸಭೆ ಆವರಣದಲ್ಲಿ ಜಮಾಯಿಸಿದ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ ನಂತರ ಮಾರಿಕಾಂಭ ದ್ವಾರದ ಬಳಿ ಮಾನವ ಸರಪಳಿ ರಚಿಸಿ ರಸ್ತೆ ತಡೆದರು. ನಂತರ ಪೊಲೀಸ್, ತಹಸೀಲ್ದಾರ್ ರೂಪಾ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಅಧ್ಯೆ ವಿಜಯಲಕ್ಷಿ$್ಮ, ಸ್ಥಾಯಿ ಸಮಿತಿ ಅಧ್ಯೆ, ನಾಮಿನಿ ಸದಸ್ಯರಾದ ರಂಗಪ್ಪ, ಜಯಂತ್, ಸುರೇಶ್ಕುಮಾರ್, ಲಕ್ಷಿ$್ಮ, ಪೌರ ಕಾರ್ಮಿಕ ಸಂಘದ ಅಧ್ಯಕ್ಷ ವೆಂಕಟೇಶ್, ಪೌರಕಾರ್ಮಿಕರಾದ ವೆಂಕಟೇಶ್, ಶಾಂತಮ್ಮ, ಲಕ್ಷ್ಮಯ್ಯ, ಲಕ್ಷಿ$್ಮನಾರಾಯಣ್, ಸತ್ತಾರ್, ಕಿರಣ್, ಉಮೇಶ್, ಯುವರಾಜ್, ಮಹೇಶ್, ವೆಂಕಟಸ್ವಾಮಿ ಇದ್ದರು.
* ಏನಿದು ಪ್ರಕರಣ..?
ರಸ್ತೆ ಬದಿ ಅಕ್ರಮವಾಗಿ ಮಳಿಗೆಗಳನ್ನು ಹಾಕಿಕೊಂಡಿದ್ದು, ಅವುಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಬುಧವಾರ ಪುರಸಭೆ ಮುಖ್ಯಾಧಿಕಾರಿ ಪ್ರದಿಪ್ಕುಮಾರ್ ನೇತೃತ್ವದಲ್ಲಿ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿತ್ತು. ಈ ವೇಳೆ ಎಚ್.ಆರ್.ಆನಂದ್, ರಾಜಪ್ಪ, ಸಿದ್ಧಾರ್ಥ ಆನಂದ್ ಹಾಗೂ ಆತನ ಸಹಚರರು ಏಕಾಏಕಿ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೌರಕಾರ್ಮಿಕರನ್ನು ಸುಪಾರಿ ಕಿಲ್ಲರ್ ಎಂದು ಹೇಳುವ ಮೂಲಕ ಅವಮಾನಿಸಿ ತೇಜೋವಧೆ ಮಾಡಿದ್ದಾರೆ. ಆಗ ಸಿದ್ಧಾರ್ಥ ಆನಂದ್ ಮತ್ತು ಪೌರಕಾರ್ಮಿಕರು, ಪೌರಾಯುಕ್ತರ ನಡುವೆ ವಾಗ್ವಾದ ನಡೆಯಿತು. ಸಾರ್ವಜನಿಕರ ಸೇವಕರಾದ ನಮಗೆ ಇದರಿಂದ ಅವಮಾನವಾಗಿದ್ದು, ಇವರ ವಿರುದ್ಧ ಎ.ರಾಜಪ್ಪ, ಸದಸ್ಯರಾದ ಎನ್.ವಿ.ಮುರುಳಿಧರ್, ಇಂತಿಯಾಜ್, ಪದ್ಮಾ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ.
* ಎಫ್ಐಆರ್ ದಾಖಲು
ಪೌರಕಾರ್ಮಿಕ ಮಹಿಳೆ ಸಿ.ಶಾಂತಮ್ಮ ಅವರು ಟನೆ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಸಿದ್ಧಾರ್ಥ ಆನಂದ್ ವಿರುದ್ಧ ಮಾಲೂರು ಠಾಣೆ ಪೊಲೀಸರು ಎ್ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ. ಅಂಗಡಿಗಳನ್ನು ತೆರವುಗೊಳಿಸಲು ನಿಮಗೇನು ಅಧಿಕಾರ ಇದೆ, ನೀವೇನು ರೌಡಿಗಳ ಎಂದು ಪ್ರಶ್ನಿಸಿ ಸುಪಾರಿ ಕಿಲ್ಲರ್ಗಳು ಎಂದು ನಿಂಧಿಸಿದ್ದಾರೆ. ಇದರಿಂದ ನಮಗೆ ಪ್ರಾಣ ಬೆದರಿಕೆ ಇದೆ ಎಂದು ದೂರಿನಲ್ಲಿ ಅಪಾದಿಸಿದ್ದಾರೆ.