ಅಧಿಕಾರಿಗಳನ್ನು ಎಚ್ಚರಿಸಲು ಕೈ ಪ್ರತಿಭಟನೆ : ಇಂಧನ ಬೆಲೆ ಏರಿಕೆಗೆ ವಿರೋಧ ಸರ್ವೇ ಅಧಿಕಾರಿಗಳ ವಿಳಂಬ ನೀತಿ ಪೊಲೀಸರ ಜತೆ ಮಾತಿನ ಚಕಮಕಿ

09-03-rama-protest
Published on

ರಾಮನಗರ : ಅರ್ಜಿ ವಿಲೇವಾರಿಗೆ ಸರ್ವೇ ಅಧಿಕಾರಿಗಳ ವಿಳಂಬ ನೀತಿ, ಇಂಧನ ಬೆಲೆ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ನಗರದ ಐಜೂರು ವೃತ್ತದಿಂದ ಮಿನಿ ವಿಧಾನಸೌಧದ ಸರ್ವೇ ಇಲಾಖೆ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಪಕ್ಷದ ನೂರಾರು ಕಾರ್ಯಕರ್ತರು, ಸಿಲಿಂಡರ್ ಹೊತ್ತು, ಟ್ರ್ಯಾಕ್ಟರ್, ಕಾರಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಪೆಟ್ರೋಲ್ ದರ ಹೆಚ್ಚಳ ವಿರುದ್ಧ ಘೋಷಣೆ ಕೂಗಿದರು.

ಅಲ್ಲದೆ, ಸರ್ವೇ ಕಚೇರೀಗೆ ಬೀಗ ಜಡಿಯುವ ಸಾಧ್ಯತೆ ಇದ್ದ ಕಾರಣ, ಮಿನಿವಿಧಾನಸೌಧ ಪ್ರವೇಶ ದ್ವಾರದಲ್ಲಿಯೇ ಪ್ರತಿಭಟನಾಕಾರರನ್ನು ಪೋಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿ ಜಿಪಂ ಮಾಜಿ ಅಧ್ಯಕ್ಷ ಎಚ್.ಎ. ಇಕ್ಬಾಲ್ ಹುಸೇನ್, ಎರಡು ವರ್ಷದಿಂದ ಸರ್ವೇ ಇಲಾಖೆ ಸಮಸ್ಯೆಯಿಂದ ರೈತರು, ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ, ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಕ್ರಮ ಕೈಗೂಂಡಿಲ್ಲ. ಅಧಿಕಾರಿಗಳನ್ನು ಎಚ್ಚರಿಸಲು ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ ಎಂದರು.

ಈ ಕ್ಷೇತ್ರದ ಜನರ ಅಶೀರ್ವಾದ ಪಡೆದು ಪ್ರಧಾನಿ, ಮುಖ್ಯಮಂತ್ರಿ ಆದರೂ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ರೈತರ ಭೂ ಒಡೆತನದ ದಾಖಲೆಗಳಿಗಾಗಿ ಅಧಿಕಾರಿಗಳಿಗೆ ಲಂಚ ನೀಡಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಮಸ್ಯೆ ಬಗೆಹರಿಸುತ್ತಿಲ್ಲವೇಕೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಜನರ ನೆರವಿಗೆ ನಿಲ್ಲಬೇಕಾದ ಶಾಸಕರು ಕ್ಷೇತ್ರಕ್ಕೆ ಅತಿಥಿಯಾಗಿದ್ದಾರೆ ಎಂದು ಇಕ್ಬಾಲ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಜಿಲ್ಲಾ ಕೇಂದ್ರದ ಕಚೇರಿಗಳಲ್ಲಿ ನೂರಾರು ಸಮಸ್ಯೆಗಳು ತಾಂಡವವಾಡುತ್ತಿವೆ. ಅಧಿಕಾರಿಗಳ ಸಭೆ ನಡೆಸಿ ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕರು ಮುಂದಾಗಿಲ್ಲ. ಆದ್ದರಿಂದ ಇ-ಸ್ವತ್ತು ಸೇರಿದಂತೆ ಹದ್ದುಬಸ್ತು, ಹಕ್ಕುಪತ್ರ ವಿತರಣೆ ವಿಳಂಬವಾಗುತ್ತಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿದರು. ಕೆಪಿಸಿಸಿ ಸದಸ್ಯ ಕೆ.ರಮೇಶ್, ಜಿಪಂ ಅಧ್ಯಕ್ಷ ಎಚ್.ಎನ್.ಅಶೋಕ್, ತಾಪಂ ಅಧ್ಯಕ್ಷ ಎಸ್,ಪಿ. ಜಗದೀಶ್, ಮಾಜಿ ಅಧ್ಯಕ್ಷ ಎಸ್.ಟಿ.ಕಾಂತರಾಜ್ ಪಟೇಲ್, ಗಾಣಕಲ್ ನಟರಾಜು, ಮಹದೇವಯ್ಯ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಜಯಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಬಿ.ಚೇತನ್‌ಕುಮಾರ್, ವಿ.ಎಚ್.ರಾಜು, ಅಶೋಕ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

ಮೂರು ತಿಂಗಳು ಗಡುವು : ಪ್ರತಿಭಟನಾ ಸ್ಥಳಕ್ಕೆ ಸರ್ವೇ ಇಲಾಖೆ ಡಿಡಿಎಲ್‌ಆರ್ ಸಂತೋಷ್ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ, ರೈತರು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಉಪ ವಿಭಾಗಾಧಿಕಾರಿಗಳು ಮತ್ತು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು 14 ಸರ್ವೇಯರ್‌ಗಳ ಮೂಲಕ ಗ್ರಾಮವಾರು ಪಟ್ಟಿ ಮಾಡಿ, ಮೂರು ತಿಂಗಳ ಒಳಗಾಗಿ ಎಲ್ಲ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಗೋ ಬ್ಯಾಕ್ ಚಳವಳಿ : ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಾಪನೆಗೆ ಅಡ್ಡಿಯಾಗಿದ್ದವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಇದು ನಮ್ಮ ಜಿಲ್ಲೆಯ ಜನರ ದುರ್ದೈವ. ಕೇವಲ ಕೆಡಿಪಿ, ಜನಸಂಪರ್ಕದಂತಹ ಸಭೆ ನಡೆಸಿದರೆ ಪ್ರಯೋಜನವಾಗುವುದಿಲ್ಲ.

ಬದಲಿಗೆ ಬಾಕಿ ಉಳಿದಿರುವ ಅರ್ಜಿಗಳ ಬಗ್ಗೆ ಪರಿಶೀಲಿಸಿದರೆ ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ. ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳದಿದ್ದರೆ, ಕೆಡಿಪಿ ಸಭೆಗಳಲ್ಲಿ ಧಿಕ್ಕಾರ ಕೂಗಿ, ಗೋಬ್ಯಾಕ್ ಚಳವಳಿ ಹಮ್ಮಿಕೂಳ್ಳಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಾಲಕೃಷ್ಣ ಎಚ್ಚರಿಕೆ ನೀಡಿದರು.

ಎಚ್‌ಡಿಕೆ ವಿರುದ್ಧ ಕಿಡಿ

ರೈತರ ಕಷ್ಟ ಸುಖ ಆಲಿಸುವುದು ಕಾಂಗ್ರೆಸ್ ಕೆಲಸವಲ್ಲ. ನಿಮ್ಮನ್ನು ಅಯ್ಕೆ ಮಾಡಿರುವ ಜನರ ಸಮಸ್ಯೆಗಳಿಗೆ ಸ್ಪಮದಿಸುವುದು ಶಾಸಕರ ಕೆಲಸ. ಈಗಲಾದರೂ ರಾಜಕಾರಣ ಮಾಡದೆ ಜನರ ನೋವನ್ನು ಆಲಿಸಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೆಸರು ಹೇಳದೆ ಬಾಲಕೃಷ್ಣ ಕಿಡಿ ಕಾರಿದರು.

ನಾಟ್ ರೀಚಬಲ್...  : ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ರೈತರಿಂದ ಹಣ ಕಟ್ಟಿಸಿಕೊಂಡಿರುವ ಸರ್ವೇ ಇಲಾಖೆ ಕೆಸಲ ಮಾಡಿಕೊಡಲು ಮೀನಮೇಷ ಎಣಿಸುತ್ತಿದೆ. ಲಂಚ ನೀಡಿದರಷ್ಟೇ ಕೆಲಸ ಆಗುತ್ತದೆ. ಇಲ್ಲ ಕಡತ ಧೂಳು ಹಿಡಿಯುತ್ತದೆ. ಜನರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ೆನ್ ಮಾಡಿದರೆ ಸ್ವಿಚ್ ಆ್ ಇಲ್ಲವೇ ನಾಟ್ ರೀಚಬಲ್ ಉತ್ತರ ಸಿಗುತ್ತದೆ. ನನ್ನದೇ ಕೆಲಸ ಬಾಕಿ ಉಳಿದಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಪ್ರತಿಭಟನೆ : ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದಲ್ಲಿ ಮಂಗಳವಾರ ಕನಕಪುರ  ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಜಮಾವಣೆಗೊಂಡ ಪಕ್ಷದ ಕಾರ್ಯಕರ್ತರು, ಮುಖಂಡರು, ಮೆರವಣಿಗೆ ನಡೆಸಿ ಚನ್ನಬಸಪ್ಪ ವೃತ್ತದ್ಲಲಿ ಕೇಂದ್ರ ಸರ್ಕಾರದ ವಿರುಧ್ಧ ೋಷಣೆ ಕೂಗಿದರು. ನಂತರ ಅಗತ್ಯವಸ್ತುಗಳ ಬೆಲೆ ಇಳಿಸುವಂತೆ ತಾಲೂಕು ಶಿರಸ್ತೇದಾರ್ ರಘು ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬೆಲೆ ಏರಿಕೆಯಿಂದ ಜನತೆ ತತ್ತರಿಸಿಹೋಗಿದ್ದು, ಬಡವರು ಬದುಕು ಸಾಗಿಸುವುದೇ ದುಸ್ತರವಾಗಿದೆ. ಕೇಂದ್ರ ಸರ್ಕಾರದ ಏಕರೂಪ ತೆರಿಗೆ ನೀತಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸೇರದಿರುವುದು ಇದಕ್ಕೆ ಕಾರಣವಾಗಿದೆ ಎಂದರು.

ತಾಪಂ ಅಧ್ಯಕ್ಷ ನಾಗು, ಮಾಜಿ ಅಧ್ಯಕ್ಷರಾದ ರಾಜಶೇಖರ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಎಂ.ಡಿ.ವಿಜಯದೇವ್, ಆರ್.ಕೃಷ್ಣಮೂರ್ತಿ, ಜಿಪಂ ಉಪಾಧ್ಯಕ್ಷ ಜಯರತ್ನ ರಾಜೇಂದ್ರ, ಸದಸ್ಯರಾದ ಬಸಪ್ಪ, ಶಂಕರ್, ಉಷಾರವಿ, ನಗರಸಭಾಧ್ಯಕ್ಷ ಮಕ್ಬುಲ್‌ಪಾಷ, ಮಾಜಿ ಅಧ್ಯಕ್ಷ ಕೆ.ಎನ್.ದಿಲೀಪ್, ಉಪಾಧ್ಯಕ್ಷ ಗುಂಡಣ್ಣ, ರಾಜ್ಯ ಕಾಂಗ್ರೆಸ್ ಕಿಸಾನ್ ಮೋರ್ಚ ಉಪಾಧ್ಯಕ್ಷ ಕೋಡಿಹಳ್ಳಿ ಮಹದೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್‌ಕುಮಾರ್, ಮುಖಂಡರಾದ ಏಳಗಳ್ಳಿ ರವಿ, ಜೋಸೆಫ್ ಗೊನ್ಸಾಲ್ವಿಸ್, ಚೀರಣಕುಪ್ಪೆ ರವಿ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net