ಸಂವಿಧಾನ ರಕ್ಷಣೆ ಪ್ರತಿಯೊಬ್ಬ ಭಾರತೀಯರ ಹೊಣೆ

dss programme
ನಗರದ ಬಾಲರಾಜ್ ಅರಸ್ ರಸ್ತೆಯ ಡಿಎಸ್‌ಎಸ್ ಜಿಲ್ಲಾ ಕಚೇರಿಯಲ್ಲಿ ಭೀಮ ಕೋರೆಗಾಂವ್ ವಿಜಯದ ದಿನ-ಶೋಷಿತರ ವಿಮುಕ್ತಿಯ ದಿನ ವಿಜಯೋತ್ಸವವನ್ನು ನಿವೃತ್ತ ಪ್ರಾಚಾರ್ಯ ಪ್ರೊ. ಎಚ್.ರಾಚಪ್ಪ ಉದ್ಘಾಟಿಸಿದರು. ಟಿ.ಹಾಲೇಶಪ್ಪ, ಎಸ್.ಎಚ್.ಧನಂಜಯ್, ಎ.ಡಿ.ಆನಂದಪ್ಪ, ಎಂ.ಮಂಜುನಾಥ, ಸಂತೇಕಡೂರು ಪರಮೇಶ್, ಹುಣಸೋಡು ಶೇಷಪ್ಪ, ಸೂಗೂರು ಪರಮೇಶ್, ಲತಾ ಹರೀಶ್, ಕಲ್ಲಿಹಾಳ್ ಹನುಮಂತಪ್ಪ ಇದ್ದರು.
Published on

ಶಿವಮೊಗ್ಗ: ಭಾರತೀಯರ ಸ್ವಾಭಿಮಾನವೇ ಸಂವಿಧಾನವಾಗಿ ರೂಪುಗೊಂಡಿದ್ದು ಅದರ ರಕ್ಷಣೆ ಪ್ರತಿಯೊಬ್ಬ ಭಾರತೀಯರ ಹೊಣೆಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಎಚ್.ರಾಚಪ್ಪ ಹೇಳಿದರು.

ನಗರದ ಬಾಲರಾಜ್ ಅರಸ್ ರಸ್ತೆಯ ಡಿಎಸ್‌ಎಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಜಿಲ್ಲಾ ಸಮಿತಿಯಿಂದ ಭೀಮ ಕೋರೆಗಾಂವ್ ವಿಜಯದ ದಿನ-ಶೋಷಿತರ ವಿಮುಕ್ತಿಯ ದಿನ ವಿಜಯೋತ್ಸವ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಸ್ವಾತಂತ್ರ್ಯ ಪೂರ್ವ ಪೇಶ್ವೆಗಳ ಆಡಳಿತ ಅತ್ಯಂತ ಕ್ರೂರವಾಗಿತ್ತು. ಶೂದ್ರ ಸಮುದಾಯವನ್ನು ಹೀನಾಯವಾಗಿ 100 ವರ್ಷ ಕ್ರೌರ್ಯ ನಡೆಸಿ, ಗುಲಾಮರನ್ನಾಗಿಟ್ಟುಕೊಂಡಿದ್ದ ಪೇಶ್ವೆಗಳನ್ನು ಕೋರೆಗಾಂವ್ ಯುದ್ದದಲ್ಲಿ ಮಹರ್ ರೆಜಿಮೆಂಟಿನ ನಾಯಕ ಸಿದ್ದನಾಯಕ ನೇತೃತ್ವದಲ್ಲಿ 500 ಸೈನಿಕರು, ಭಾರತದ ಮೂಲನಿವಾಸಿಗಳ, ಶೋಷಿತ ಸಮುದಾಯಗಳ ವಿಮೋಚನೆಗಾಗಿ, ಸ್ವಾಭಿಮಾನಕ್ಕಾಗಿ ಪೇಶ್ವೆಗಳ 29 ಸಾವಿರ ಸೈನಿಕರ ವಿರುದ್ಧ ಹೋರಾಡಿ ಜಯಗಳಿಸಿದ ದಿನವಾಗಿದೆ. ಈ ಯುದ್ದದಲ್ಲಿ ಮಹರ್ ರೆಜಿಮೆಂಟಿನ 28 ಮಹಾ ಸೈನಿಕರು ಹುತಾತ್ಮರಾಗಿದ್ದಾರೆ. ಆವರ ಹೋರಾಟದ ಸ್ವಾಭಿಮಾನವೇ ಇಂದು ಸಂವಿಧಾನವಾಗಿ ರೂಪುಗೊಂಡಿದೆ ಎಂದರು.

ಅವರ ನೆನಪಿಗಾಗಿ 65 ಅಡಿ ಸ್ಮಾರಕವನ್ನು ಕೋರೆಗಾಂವ್‌ನಲ್ಲಿ ನಿರ್ಮಿಸಲಾಗಿದ್ದು ಅವರು ತಂದು ಕೊಟ್ಟ ಸ್ವಾಭಿಮಾನದ ಮೊದಲ ಸ್ವಾತಂತ್ರ್ಯ ನಂತರ ನಮ್ಮ ಎಲ್ಲ ಹೋರಾಟದ ಹಿರಿಯ ಸಮಾಜ ಸುಧಾರಕರ ಸಂವಿಧಾನ ಈಗ ಅಪಾಯದಲ್ಲಿದೆ. ಇದರ ರಕ್ಷಣೆ ಪ್ರತಿಯೊಬ್ಬ ಭಾರತೀಯರ ಹೊಣೆಯಾಗಿದೆ ಎಂದು ತಿಳಿಸಿದರು.

ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹಾಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಎಸ್.ಎಚ್.ಧನಂಜಯ್, ಎ.ಡಿ.ಆನಂದಪ್ಪ, ಎಂ.ಮಂಜುನಾಥ, ಸಂತೇಕಡೂರು ಪರಮೇಶ್, ಹುಣಸೋಡು ಶೇಷಪ್ಪ, ಸೂಗೂರು ಪರಮೇಶ್, ಲತಾ ಹರೀಶ್, ಹಾಗೂ ಕಲ್ಲಿಹಾಳ್ ಹನುಮಂತಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net