

ಗುಂಡ್ಲುಪೇಟೆ : ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಟ್ಟಣದ ಹೋಟೆಲ್, ಅಂಗಡಿ ಮುಂತಾದ ಕಡೆಗಳಿಗೆ ದಾಳಿ ನಡೆಸಿ ಬಾಲ ಕಾರ್ಮಿಕನನ್ನು ಪತ್ತೆಹಚ್ಚಿದರು.
ಬುಧವಾರ ಸಂಜೆ ಹೋಟೆಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಿಶೋರಾವಸ್ಥೆಯಲ್ಲಿದ್ದ ಒಂದು ಮಗುವನ್ನು ಪತ್ತೆ ಹಚ್ಚಿ ಮಗುವನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರ ವಿರುದ್ಧ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿದರು.
ತಂಡದಲ್ಲಿ ಗುಂಡ್ಲುಪೇಟೆ ಕಾರ್ಮಿಕ ನಿರೀಕ್ಷಕ ನಾರಾಯಣ್ ಮೂರ್ತಿ, ಯೋಜನಾ ನಿರ್ದೇಶಕ ಮಹೇಶ್, ಬಚಪನ್ ಬಚಾವ್ ಆಂದೋಲನ ರಾಜ್ಯ ಸಂಯೋಜಕ ಬಿನು ವರ್ಗೇಶ್, ಸಹಾಯಕ ಯೋಜನಾಧಿಕಾರಿ ರಿಯಾಜ್ ಅಹಮದ್, ಕಾರ್ಮಿಕ ಇಲಾಖೆಯ ಗಣೇಶ್ ಇದ್ದರು.