ಪಿಡಿಒಗಳಿಗೆ ಗೂಂಡಾ ಕಾಯ್ದೆಯಡಿ ರಕ್ಷಣೆ ನೀಡಿ; ಸರ್ಕಾರಕ್ಕೆ ಒತ್ತಾಯ

PDO-Raju
Published on

ಬೆಂಗಳೂರು: ಪಿಡಿಒಗಳಿಗೆ ಕರ್ನಾಟಕ ಗೂಂಡಾ ಕಾಯ್ದೆ-1985 ರಡಿಯಲ್ಲಿ ರಕ್ಷಣೆ ನೀಡುವಂತೆ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ಪಿಡಿಒಗಳ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ರಾಜ್ಯದ ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒಗಳು ಜೀವಭಯದಲ್ಲಿ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೋಲಾರ ಜಿಲ್ಲೆ ಕ್ಯಾಸಂಬಳ್ಳಿ, ಚಡಚಣ ತಾಲೂಕು ದೇವರನಿಂಬರಗಿ, ತುಮಕೂರು ಜಿಲ್ಲೆ ಸೂರೆಕುಂಟೆ, ಕೊಪ್ಪಳ ಜಿಲ್ಲೆ ಕುದರಿಮೋತಿ, ಕೊಡಗು ಜಿಲ್ಲೆ ನೆಲ್ಕಹುದಿಕೇರಿ, ಪುತ್ತೂರು ತಾಲೂಕು ಉಪ್ಪಿನಂಗಡಿ, ಗದಗ ಜಿಲ್ಲೆ ಹುಯಿಲಗೋಳ, ದಕ್ಷಿಣ ಕನ್ನಡ ಜಿಲ್ಲೆ ತೆಕ್ಕಾರು ಗ್ರಾಮ ಪಂಚಾಯಿತಿ ಪಿಡಿಒಗಳ ಮೇಲೆ ಹಲ್ಲೆ ನಡೆದಿದ್ದು, ಇವು ತೀರಾ ಇತ್ತೀಚಿನ ಪ್ರಕರಣಗಳಾಗಿವೆ. ಇಂತಹ ಪ್ರಕರಣಗಳು ನಿತ್ಯವೂ ನಡೆಯುತ್ತಿವೆ. ಆದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘದ ಅಧ್ಯಕ್ಷ ರಾಜು ವಾರದ ಆಗ್ರಹಿಸಿದ್ದಾರೆ.

ಪಿಡಿಒ ಸರ್ಕಾರದ ಪ್ರತಿನಿಧಿಯಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದರಿಂದ ಆತನ ರಕ್ಷಣೆಯ ಹೊಣೆ ಸರ್ಕಾರದ್ದೇ ಆಗಿದೆ. ಅದಕ್ಕಾಗಿ ಸರ್ಕಾರವು ಸೂಕ್ತ ಕ್ರಮಕೈಗೊಳ್ಳಬೇಕು. ಕರ್ನಾಟಕ ಗೂಂಡಾ ಕಾಯ್ದೆ-1985ರ ವ್ಯಾಪ್ತಿಗೆ ಗ್ರಾಮ ಪಂಚಾಯಿತಿ ಪಿಡಿಒ ಅವರ ಮೇಲೆ ಹಲ್ಲೆ ಮಾಡುವವರನ್ನು ಸೇರ್ಪಡೆಗೊಳಿಸಬೇಕು. ಆ ಮೂಲಕ ಪಿಡಿಒ ಮೇಲೆ ನಡೆಯುವ ಕೃತ್ಯಗಳನ್ನು ತಡೆಯಬಹುದು ಎಂದು ಸಂಘ ದಾಗಿದೆ. ದೆ, ಪಿಡಿಒ ರಾಜ್ಯ ಸಂಘವು ಸರ್ಕಾರವನ್ನು ಆಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net