

ಭಟ್ಕಳ: ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಮುರ್ಡೆಶ್ವರದ ವಸತಿಗೃಹದ ಮೇಲೆ ದಾಳಿ ನಡೆಸಿದ ಕಾರವಾರದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿದ್ದಾಪುರ ತಾಲೂಕಿನ ದೊಡ್ಡನೆ ಬಳೂರು ನಿವಾಸಿ ಮೋಹನ ಮಾಬ್ಲು ಗೌಡ ಮತ್ತು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತವನಂದಿ ನಿವಾಸಿ ಶಿವಕುಮಾರ ಬಂಗಾರಪ್ಪ ನಾಯ್ಕ ಬಂಧಿತರು.
ಇವರು ಮುರ್ಡೆಶ್ವರದ ಶೆಟ್ಟರಕೇರಿಯ ಈಶ್ವರ ಶನಿಯಾರ ನಾಯ್ಕ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಹಿಳೆಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಡಿವೈಎಸ್ಪಿ ಅಶ್ವಿನಿ ಬಿ. ನೇತೃತ್ವದಲ್ಲಿ ದಾಳಿ ನಡೆದಿತ್ತು. ದಾಳಿಯ ವೇಳೆ ಮಹಿಳೆ ಸ್ಥಳದಿಂದ ಓಡಿ ಹೋಗಿದ್ದಾಳೆ. ಮುರ್ಡೆಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.