ವಯನಾಡು ಸಂತ್ರಸ್ತ ಕುಟುಂಬಗಳಿಗೆ ಕ್ಲೈಮ್ ಮೊತ್ತ ತ್ವರಿತವಾಗಿ ನೀಡಿ: ವಿಮಾ ಕಂಪನಿಗಳಿಗೆ ಸೂಚನೆ

kerala
Published on

ನವದೆಹಲಿ: ಕೇರಳದ ವಯನಾಡ್​ ಸಂತ್ರಸ್ತರ ಮತ್ತು ಅವರ ಕುಟುಂಬಗಳಿಗೆ ಕ್ಲೈಮ್ ಮೊತ್ತವನ್ನು ತ್ವರಿತವಾಗಿ ನೀಡುವಂತೆ ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ) ಸೇರಿದಂತೆ ಸಾರ್ವಜನಿಕ ವಲಯದ ವಿಮಾ ಕಂಪನಿಗಳಿಗೆ ಹಣಕಾಸು ಸಚಿವಾಲಯ ಶನಿವಾರ ಹೇಳಿದೆ.

ವಯನಾಡ್, ಪಾಲಕ್ಕಾಡ್, ಕೋಝಿಕ್ಕೋಡ್, ಮಲಪ್ಪುರಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಸಹಾಯಕ್ಕಾಗಿ ಸಂಪರ್ಕ ವಿವರಗಳನ್ನು ಒದಗಿಸಲು ವಿಮಾ ಕಂಪನಿಗಳು ತಮ್ಮ ಪಾಲಿಸಿದಾರರನ್ನು ವಿವಿಧ ಮಾರ್ಗಗಳ ಮೂಲಕ (ಸ್ಥಳೀಯ ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು, ಕಂಪನಿ ವೆಬ್‌ಸೈಟ್‌ಗಳು, ಎಸ್‌ಎಂಎಸ್, ಇತ್ಯಾದಿ) ಸಂಪರ್ಕಿಸಲು ಪ್ರಯತ್ನಿಸುತ್ತಿವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ಲೈಮ್‌ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಹಣಕಾಸು ಸಚಿವಾಲಯವು ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿದೆ.

ಎಲ್ಐಸಿ, ನ್ಯಾಷನಲ್ ಇನ್ಶುರೆನ್ಸ್ ಕಾರ್ಪೊರೇಷನ್, ನ್ಯೂ ಇಂಡಿಯಾ ಅಶ್ಯೂರೆನ್ಸ್, ಓರಿಯಂಟಲ್ ಇನ್ಶುರೆನ್ಸ್ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಸೇರಿದಂತೆ ಸಾರ್ವಜನಿಕ ವಲಯದ ವಿಮಾ ಕಂಪನಿಗಳಿಗೆ (ಪಿಎಸ್ಐಸಿ) ಎಲ್ಲಾ ಸಂಭಾವ್ಯ ಬೆಂಬಲ ನೀಡುವುದು ಕಡ್ಡಾಯ. ಸಂತ್ರಸ್ತರಿಗೆ ವಿಮಾ ಹಕ್ಕುಗಳನ್ನು ತ್ವರಿತವಾಗಿ ನೀಡಬೇಕು ಎಂದು ಸಚಿವಾಲಯ ಹೇಳಿದೆ.

ಸಂತ್ರಸ್ತರಿಗೆ ಅಗತ್ಯ ಬೆಂಬಲ ನೀಡಲು ಕೇಂದ್ರ ಸರ್ಕಾರ ಮತ್ತು ಹಣಕಾಸು ಸಚಿವಾಲಯ ಬದ್ಧವಾಗಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಅಡಿಯಲ್ಲಿ ಪಾಲಿಸಿದಾರರಿಗೆ ಸಂಬಂಧಿಸಿದಂತೆ ಕ್ಲೈಮ್ ಮೊತ್ತವನ್ನು ತ್ವರಿತವಾಗಿ ವಿತರಿಸಲು ಎಲ್​ಐಸಿಗೆ ತಿಳಿಸಲಾಗಿದೆ. ಅಲ್ಲದೆ ಕ್ಲೈಮ್ ಮೊತ್ತದ ತ್ವರಿತ ವಿತರಣೆಗಾಗಿ ಪ್ರಕ್ರಿಯೆಗಾಗಿ ಅಗತ್ಯ ದಾಖಲಾತಿ ಸಲ್ಲಿಕೆಯನ್ನು ಸಡಿಲಿಸಲಾಗಿದೆ ಎಂದು ಅದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net