ಬೈಕ್ ರಾಲಿ ತೆರಳಿ ಸಾಲ ಮನ್ನಾ ಆಂದೋಲನ ಪ್ರಚಾರ

21tnpnewsfile02
Published on

ತಿ.ನರಸೀಪುರ: ವಿಶ್ವ ರೈತ ದಿನಾಚರಣೆ ಅಂಗವಾಗಿ ಡಿ.23ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಸಾಲ ಮನ್ನಾ ಆಂದೋಲನದ ಅಂಗವಾಗಿ ತಿ.ನರಸೀಪುರ ತಾಲೂಕಿನ ಹಳ್ಳಿಗಳಿಗೆ ರೈತರು ಬೈಕ್ ರಾಲಿ ತೆರಳಿ ಪ್ರಚಾರ ನಡೆಸಿದರು.


ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ಮಾತನಾಡಿ, ತಿ.ನರಸೀಪುರ ತಾಲೂಕು ಸೇರಿದಂತೆ ಮೈಸೂರು ಜಿಲ್ಲೆಯಾದ್ಯಂತ 5,000 ಜನರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.


ರಾಜ್ಯದ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬರಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬಗ್ಗೆ ನಿರ್ಲಕ್ಷ್ಮ ಮನೋಭಾವ ತಾಳುತ್ತಿವೆ. ರೈತರು ಬೆಳೆ ಬೆಳೆಯಲು ಬ್ಯಾಂಕುಗಳಿಂದ ಸಾಲ ಮಾಡಿರುತ್ತಾರೆ. ಈ ವರ್ಷ ರಾಜ್ಯದಾದ್ಯಂತ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ರೈತರು ಜೀವನ ನಡೆಸುವುದೇ ಕಷ್ಟವಾಗಿದೆ ಎಂದರು.


ಬೈಕ್ ರಾಲಿಯಲಿ ರೈತ ಮುಖಂಡರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರುಗುಸೂರು ಶಂಕರ್, ತಾಲೂಕು ಪ್ರಧಾನ ಕಾರ್ಯದರ್ಶಿ ಕಿರಗಸೂರು ಪ್ರಸಾದ್, ನಾಯಕ್ ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ಗೌರಿಶಂಕರ್, ರಾಜೇಂದ್ರ, ಉಮೇಶ, ಅಪ್ಪಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net