Promising loan : ನಾಟಿ ಕೋಳಿಯನ್ನೇ ಲಂಚವಾಗಿ ಕೇಳುತ್ತಿದ್ದ ಬ್ಯಾಂಕ್ ಮ್ಯಾನೇಜರ್‌!

hen
Published on

ಛತ್ತೀಸ್‌ಗಢ : (Promising loan ) ಬ್ಯಾಂಕ್‌ ಮ್ಯಾನೇಜರ್ ಒಬ್ಬ ನಾಟಿ ಕೋಳಿಯನ್ನ ರೈತನೊಬ್ಬನಿಂದ ಲಂಚ ಪಡೆದ ಘಟನೆಯೊಂದು ಛತ್ತೀಸ್‌ಗಢದಲ್ಲಿ ಬೆಳಕಿಗೆ ಬಂದಿದೆ.

ನಡೆದಿದ್ದೇನು?: ರೂಪಚಂದ್ ಮನಹರ್ ಎಂಬ ರೈತ ಛತ್ತೀಸ್‌ಗಢ ಬಿಲಾಸ್‌ಪುರ ಜಿಲ್ಲೆಯಲ್ಲಿ ನಾಟಿ ಕೋಳಿ ಫಾರಂ ನಡೆಸುತ್ತಿದ್ದ. ರೈತ ಮಸ್ತೂರಿಯ SBI ಬ್ಯಾಂಕ್‌ಗೆ ಹೋಗಿ,  12 ಲಕ್ಷ ರೂಪಾಯಿ ಸಾಲಕ್ಕಾಗಿ ಆ ಬ್ಯಾಂಕ್ ಮ್ಯಾನೇಜರ್ ರೈತನ ಬಳಿ ಲಂಚ ಕೇಳಿದ್ದಾನೆ.ರೈತನಿಗೆ 12 ಲಕ್ಷ ರೂಪಾಯಿ ಸಾಲ ಸ್ಯಾಂಕ್ಷನ್ ಆಗುವ ಆಸೆಯಿಂದ ಬ್ಯಾಂಕ್ ಮ್ಯಾನೇಜರ್‌ಗೆ ನಾಟಿ ಕೋಳಿಯನ್ನೇ ಲಂಚವಾಗಿ ಕೊಡಲು ಆರಂಭಿಸಿದ್ದಾನೆ. ಬರೋಬ್ಬರಿ 39 ಸಾವಿರ ರೂಪಾಯಿವರೆಗೂ ನಾಟಿ ಕೋಳಿಯನ್ನ ರೈತ ಬ್ಯಾಂಕ್ ಮ್ಯಾನೇಜರ್‌ಗೆ ಲಂಚವಾಗಿ ಕೊಟ್ಟಿದ್ದಾನೆ.

ರೈತನ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ಬ್ಯಾಂಕ್ ಮ್ಯಾನೇಜರ್ ಪ್ರತಿ ಶನಿವಾರ ಒಂದು ನಾಟಿ ಕೋಳಿಯನ್ನ ತಂದುಕೊಂಡು ಎಂದು ಕೇಳಿದ್ದಾನೆ. ನಾಟಿ ಕೋಳಿ ಕೊಟ್ಟ ರೈತನಿಗೆ ಸಾಲ ಮಾತ್ರ ಮಂಜೂರಿ ಮಾಡಿಲ್ಲ. ಈ ವಿಚಾರವಾಗಿ ರೈತ ಮನನೊಂದಿದ್ದನು.ಬ್ಯಾಂಕ್ ಮ್ಯಾನೇಜರ್‌ ವಿರುದ್ಧ  ರೈತ ತಿರುಗಿಬಿದ್ದಿದ್ದಾನೆ.

ಸಾಲ ಕೊಡದ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳಲೇ ಬೇಕು. ನಾನು ಕೊಟ್ಟ ನಾಟಿ ಕೋಳಿಗಳ ಬೆಲೆ 39,000 ರೂಪಾಯಿಯನ್ನು ವಾಪಸ್ ಮಾಡಬೇಕು ಎಂದು ಪ್ರತಿಭಟನೆಗೆ ಮುಂದಾಗಿದ್ದಾನೆ.  ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರಾಣ ಕಳೆದುಕೊಳ್ಳುವ ಬೆದರಿಕೆಯನ್ನು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net