ಜಮ್ಮು-ಕಾಶ್ಮೀರದ ಖ್ಯಾತ ವಕೀಲನ ಹತ್ಯೆ: ಕೆಲವೇ ದಿನಗಳ ಹಿಂದಿನ ಅವರ ಟ್ವೀಟ್​ ಹೀಗಿತ್ತು...

Lawyer
Published on

ಶ್ರೀನಗರ: ಜಮ್ಮುಕಾಶ್ಮೀರದ ಪ್ರಮುಖ ವಕೀಲ, ಟಿವಿ ಪ್ಯಾನಲಿಸ್ಟ್​ ಬಾಬರ್ ಖಾದ್ರಿ ಅವರನ್ನು ಅಪರಿಚಿತನೋರ್ವ ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಇಂದು ಸಂಜೆ ಶ್ರೀನಗರದ ಹವಾಲ್​ ಏರಿಯಾದಲ್ಲಿ ದುರ್ಘಟನೆ ನಡೆದಿದೆ. ​

ಖಾದ್ರಿ ಅವರ ಮೇಲೆ ಅಪರಿಚಿತನೋರ್ವ ಗುಂಡು ಹಾರಿಸಿದ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಜಮ್ಮು-ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಕಟು ವಿಮರ್ಶಕರೊಬ್ಬರಲ್ಲಾಗಿದ್ದ ಬಾಬರ್​ ಖಾದ್ರಿ ಸೆಪ್ಟೆಂಬರ್ 13ರಂದು ಟ್ವೀಟ್ ಮಾಡಿ, ಜಮ್ಮುಕಾಶ್ಮೀರದಲ್ಲಿ ಆರ್ಟಿಕಲ್​ 370 ಮತ್ತು 35 ಎಯನ್ನು ರದ್ದುಗೊಳಿಸಿದ್ದು ದೇಶದ ಜನರ ಹಿತಾಸಕ್ತಿಗಾಗಿ ಅಲ್ಲ, ಬಂಡವಾಳಶಾಹಿತ್ವವನ್ನು ಉತ್ತೇಜಿಸುವುದೇ ಇದರ ಉದ್ದೇಶ. ಬಡ ಕಾಶ್ಮೀರಿಗಳ ಜೀವನಕ್ಕೆ ಆಧಾರವಾಗಿದ್ದ ಕಂಪನಿಗಳನ್ನು ಇದೀಗ ಉತ್ಖನನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ರಾಹುಲ್​ ರೋರಿಂಗ್​ ಶತಕ: ಕೊಹ್ಲಿ ಪಡೆಗೆ ಬೃಹತ್​ ಗುರಿ ನೀಡಿದ ಪಂಜಾಬ್​ ಕಿಂಗ್ಸ್!

ಹಾಗೇ, ಇನ್ನೊಂದು ಟ್ವೀಟ್​​ನಲ್ಲಿ, ನಾನು ಏಜೆನ್ಸೀಗಳಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಹ್​ ನಾಜೀರ್ ಎಂಬಾತ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದು, ಆತನ ವಿರುದ್ಧ ರಾಜ್ಯ ಪೊಲೀಸರು ಎಫ್​ಐಆರ್ ದಾಖಲಿಸಬೇಕು ಎಂದು ಒತ್ತಾಯಿಸುತ್ತೇನೆ. ಈ ಸುಳ್ಳು ಪ್ರಚಾರದಿಂದ ನನ್ನು ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದೂ ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net