ಸೆ.2ರವರೆಗೆ ತುಂಗಾ ಜಲಾಶಯ ಸುತ್ತಮುತ್ತ ನಿಷೇಧಾಜ್ಞೆ

Tunga dam
ಶಿವಮೊಗ್ಗದ ತುಂಗಾ ಜಲಾಶಯ
Published on

ಶಿವಮೊಗ್ಗ: ತುಂಗಾ ಜಲಾಶಯವು ಈಗಾಗಲೇ ಭರ್ತಿಯಾಗಿದ್ದು ಜಲಾಶಯದಿಂದ ಬಾರಿ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಆ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಆ.3ರಿಂದ ಸೆಪ್ಟೆಂಬರ್ 2ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

ತುಂಗಾ ಜಲನಯನ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಆಗುತ್ತಿರುವ ಪರಿಣಾಮ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಹಾಗಾಗಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪಾಗಿ ಜಲಾಶಯದ ಬಳಿ ತೆರಳುವಂತಿಲ್ಲ. ನದಿಯ ಎಡ ಮತ್ತು ಬಲ ದಂಡೆಗಳಲ್ಲಿ ನೀರಿಗೆ ಇಳಿಯುವುದು, ಫೋಟೊ ತೆಗೆಯುವುದು, ಜಲಾಶಯದ ಮೇಲೆ ಹೋಗುವುದಕ್ಕೂ ನಿರ್ಬಂಧಿಸಲಾಗಿದೆ. ಬಾಗಿನ ನೀಡಲು ಬರುವವರು ನೀರಿಹೆ ಇಳಿಯುವಂತಿಲ್ಲ ಮತ್ತು ಈಜಾಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net