ಕಂಪಲಾಪುರ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಹೊಮ್ಮಲು ಇಂತಹ ಕಲಿಕಾ ಹಬ್ಬ ಕಾರ್ಯಕ್ರಮಗಳು ಪೂರಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿಪ್ರಸನ್ನ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಜಾರಿಗೊಳಿಸಿರುವ ಕಲಿಕಾ ಹಬ್ಬ ಕಾರ್ಯಕ್ರಮಗಳು ಸರ್ಕಾರಿ ಶಾಲಾ ಮಕ್ಕಳಲ್ಲಿ ಸ್ಪೂರ್ತಿ ಚಿಲುಮೆ ಉಕ್ಕುವಂತೆ ಮಾಡುತ್ತದೆ. ಮಕ್ಕಳಿಗೆ ಪ್ರೇರಣಾ ಕಥೆ, ಸಾಹಿತ್ಯ, ಕ್ರೀಡೆ, ನಲಿಕಲಿ, ಓದು ಎಲ್ಲವನ್ನೂ ಹಮ್ಮಿಕೊಂಡು ಎಲೆಮರೆ ಕಾಯಿಯಂತಿರುವ ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗುತ್ತದೆ ಎಂದರು.
ಎಂ.ಆರ್.ನೊಬೆಲ್ ಶಾಲೆ ವತಿಯಿಂದ ಬಿಇಒ ರವಿಪ್ರಸನ್ನ ಅವರನ್ನು ಕಾರ್ಯದರ್ಶಿ ಗಿರಿಧರ್ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಇಸಿಒ ಗಣೇಶ್, ಸಿಆರ್.ಪಿ ಸುದರ್ಶನ್, ಮುಖ್ಯ ಶಿಕ್ಷಕ ಕೃಷ್ಣಕುಮಾರ್ ಸೇರಿದಂತೆ ಕ್ಲಸ್ಟರ್‌ನ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಶಿಕ್ಷಕ ಶಿಕ್ಷಕಿಯರು ,ಪೋಷಕರು ಇದ್ದರು.