ಆನವೇರಿ ಸಂಘಕ್ಕೆ ರೂ.55.36 ಲಕ್ಷ ಲಾಭ

27 HHR P 05
ಆನವೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯನ್ನು ಸಂಘದ ಅಧ್ಯಕ್ಷ ಎಂ.ಜಿ.ನಾಗರಾಜ್ ಇಟ್ಟಿಗೆಹಳ್ಳಿ ಉದ್ಘಾಟಿಸಿದರು. ಸುಶೀಲಮ್ಮ, ನಟರಾಜಪ್ಪ ಗೌಡ, ರಮೇಶ್, ಗಜೇಂದ್ರ, ಎಸ್.ಕುಮಾರ್, ರಾಜಪ್ಪ ಇತರರಿದ್ದರು.
Published on

ಹೊಳೆಹೊನ್ನೂರು: ಆನವೇರಿ ಸಹಕಾರ ಸಂಘವು 55.36 ಲಕ್ಷ ರೂ. ಲಾಭದಲ್ಲಿ ಮುನ್ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಸಂಘದ ಅಧ್ಯಕ್ಷ ಎಂ.ಜಿ ನಾಗರಾಜ್ ಇಟ್ಟಿಗೆಹಳ್ಳಿ ಹೇಳಿದರು.

ಆನವೇರಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಾಭಾಂಶದಲ್ಲಿ ಷೇರುದಾರರಿಗೆ ಶೇ.13 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದರು.
ಸಂಘದಲ್ಲಿ ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಅಡಕೆ ಹಾಗೂ ಬಂಗಾರ ಅಡಮಾನ ಸಾಲ ಸೌಲಭ್ಯವನ್ನು ಪಡೆಯಬೇಕು. ಈ ಮೂಲಕ ಷೇರುದಾರರು ಆರ್ಥಿಕವಾಗಿ ಸಬಲರಾಗಬೇಕು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ರಸಗೊಬ್ಬರ ಹಾಗೂ ಕೃಷಿ ಉಪಕರಣಗಳನ್ನು ಮಾರಾಟ ಮಳಿಗೆಗಳಲ್ಲಿಯೇ ಖರೀದಿಸಬೇಕು. ಸಂಘದಲ್ಲಿ ಪ್ರತಿ ಗುರುವಾರ ಕ್ಯಾಂಪ್ಕೋ ಸಹಯೋಗದಲ್ಲಿ ಅಡಕೆ ಮಾರಾಟ ನಡೆಯುತ್ತದೆ. ವಹಿವಾಟು ನಡೆಸುವ ಮೂಲಕ ಸಂಘದ ಉನ್ನತಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷೆ ಸುಶೀಲಮ್ಮ, ಸಿಇಒ ಗಜೇಂದ್ರ, ಪ್ರಮುಖರಾದ ಎ.ಜಿ.ರಮೇಶ್, ನಟರಾಜಪ್ಪ ಗೌಡ, ಮಹೇಂದ್ರ ಗೌಡ, ಮಹೇಶ್ವರಪ್ಪ, ಎಸ್.ಕುಮಾರ್, ರಾಜಪ್ಪ, ಜಯಾನಂದ ಶೆಟ್ಟಿ, ಲಕ್ಷ್ಮಣಪ್ಪ, ಚಂದ್ರಪ್ಪ, ಲಲಿತಮ್ಮ, ಸುರೇಶ್, ಎಸ್.ನಾಗರಾಜ್, ಅಮಾನುಲ್ಲಾ, ಮಲ್ಲಿಕಾರ್ಜುನ್, ಗೀತಾ, ಚಂದ್ರು, ರುದ್ರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net