ಉಪೇಂದ್ರ ಸಿನಿ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ ದರ್ಶನ್​! ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅಚ್ಚರಿ ಹೇಳಿಕೆ

darshan
Published on

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯಮನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪದಲ್ಲಿ ನಟ ದರ್ಶನ್​​ ವಿಚಾರಾಣಾಧಿನ ಕೈದಿಯಾಗಿ ಬಳ್ಳಾರಿ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ದರ್ಶನ್​​ ಅವರನ್ನು ಪೆರೋಲ್​ ಮೇಲೆ ಕರೆದುಕೊಂಡು ಬರಬೇಕು ಎಂದು ಆಪ್ತ ವಲಯದಲ್ಲಿ ಚರ್ಚೆ ಕೂಡಾ ನಡೆಯುತ್ತಿದೆ.

ಸದ್ಯಕ್ಕೆ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರೂ ಕೂಡ ಅಷ್ಟು ಸುಲಭವಾಗಿ ಸಿಗಲ್ಲ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ರಿಯಲ್ ಸ್ಟಾರ್ 'ಉಪೇಂದ್ರ' ಚಿತ್ರದ 25 ವರ್ಷದ ಸಂಭ್ರಮಾಚರಣೆಗೆ ದರ್ಶನ್ ಕರೆತರುವ ಬಗ್ಗೆ ಚರ್ಚೆ ಶುರುವಾಗಿದೆ.

ನಿರ್ಮಾಪಕ ಶಿಲ್ಪಾ ಶ್ರೀನಿವಾಸ್  ಖಾಸಗಿವಾಹಿನಿ ಜತೆ ಮಾತನಾಡಿ,  ವಕೀಲರ ಮೂಲಕ ದರ್ಶನ್‌ಗೆ ಪೆರೋಲ್ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೀತಿದೆ . ಇದು ಉದ್ಯಮದ ಹಬ್ಬ. ಉದ್ಯಮದ ಎಲ್ಲರೂ ಭಾಗಿ ಆಗಬೇಕು. ಡೆಪಾಸಿಟ್ ಇಟ್ಟು ದರ್ಶನ್ ಅವರನ್ನು ಪೆರೋಲ್ ಮೇಲೆ ಕರೆತರುವ ಸಾಧ್ಯತೆ ಬಗ್ಗೆ ಚಿಂತಿಸುತ್ತಿದ್ದೇವೆ  ಎಂದಿದ್ದಾರೆ.

ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಕುಟುಂಬದ ಜೊತೆ ಒಳ್ಳೆಯ ಒಡನಾಟ ಇತ್ತು . ತೂಗುದೀಪ ರಕ್ತದಲ್ಲಿ ಹಿಂಸೆ ಇಲ್ಲ. ಅವರದ್ದು ಸುಸಂಸ್ಕೃತ ಕುಟುಂಬ. ದರ್ಶನ್ ಸರ್ ನಮ್ಮ ಆಫೀಸ್‌ಗೆ ಬಂದು ಕೂರುತ್ತಿದ್ದರು. 5 ಲಕ್ಷ ರೂ. ಬಂಡಲ್ ನೋಡಬೇಕು ಎನ್ನುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಸ್ವತಃ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಉಪೇಂದ್ರ' ಸಿನಿಮಾ ದಾಖಲೆ ಬರೆದಿತ್ತು. ಈ ಚಿತ್ರವನ್ನು ಶೀಘ್ರದಲ್ಲೇ ರೀ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇದೇ ಅಕ್ಟೋಬರ್ 22ಕ್ಕೆ ಸಿನಿಮಾ 25 ವರ್ಷ ಪೂರೈಸಲಿದೆ.'ಉಪೇಂದ್ರ' ಚಿತ್ರವನ್ನು ಶಿಲ್ಪಾ ಶ್ರೀನಿವಾಸ್ ನಿರ್ಮಿಸಿದ್ದರು. ಇದೀಗ ನಿರ್ಮಾಪಕರು 25 ವರ್ಷಗಳ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿದೆ. ಬಹಳ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವ ಲೆಕ್ಕಾಚಾರ ಶುರುವಾಗಿದೆ. ಇಡೀ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರನ್ನು ಆಹ್ವಾನಿಸಿ ಕಂಡು ಕೇಳರಿಯದಂತೆ ಕಾರ್ಯಕ್ರಮ ನಡೆಸುವ ಆಲೋಚನೆಯಲ್ಲಿದ್ದಾರೆ. ಆ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net