ತುಳಸಿಯಲ್ಲಿ ದೊಡ್ಡಯ್ಯ, ಚಿಕ್ಕಯ್ಯ ಮೆರವಣಿಗೆ

06kkr1(10-24 tulsi virabadra abba
ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮದಲ್ಲಿ ಬುಧವಾರ ವೀರಭದ್ರೇಶ್ವರಸ್ವಾಮಿಗೆ ವಿಶೇಷ ಪೂಜೆ, ಮೆರವಣಿಗೆ ನಡೆಯಿತು. ಅರ್ಚಕ ಕೃಷ್ಣಪ್ಪ, ದೇವರಾಜು, ನಾಗರಾಜು, ರಘು, ಸುನಿಲ್ ಮತ್ತಿತರರಿದ್ದರು.
Published on

ಕಿಕ್ಕೇರಿ: ಹೋಬಳಿಯ ತುಳಸಿ ಗ್ರಾಮದಲ್ಲಿ ವೀರಭದ್ರೇಶ್ವರಸ್ವಾಮಿ, ದೇವರ ಭಂಟರಾದ ದೊಡ್ಡಯ್ಯ, ಚಿಕ್ಕಯ್ಯ ಅವರ ಮೆರವಣಿಗೆ ವಿಜೃಂಭಣೆಯಿಂದ ಬುಧವಾರ ನಡೆಯಿತು. ದೇವರ ಭಂಟರಾದ ಚಿಕ್ಕಯ್ಯನಿಗೆ ಗ್ರಾಮದಲ್ಲಿ ಕುರಿಬಲಿ ನೈವೇದ್ಯ ಅರ್ಪಿಸಲಾಯಿತು. ಮತ್ತೊಬ್ಬ ಭಂಟರಾದ ದೊಡ್ಡಯ್ಯ ಹಾಗೂ ವೀರಭದ್ರೇಶ್ವರಸ್ವಾಮಿಗೆ ಗ್ರಾಮಸ್ಥರು ಹಣ್ಣು, ತುಪ್ಪ, ರಸಾಯನ, ಮೊಸರನ್ನ, ಬೆಲ್ಲದನ್ನವನ್ನು ನೈವೇದ್ಯವಾಗಿ ಸಮರ್ಪಿಸಿದರು. ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ಭಕ್ತರು ದೇವರಿಗೆ ನಮಸ್ಕಾರ ಹಾಕಿ ತಮ್ಮ ಇಷ್ಟಾರ್ಥಕ್ಕೆ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net