ಪಬ್‌ನಲ್ಲಿ ಪಾಕ್ ಪರ ಘೋಷಣೆ; ಇಬ್ಬರ ಸೆರೆ

arrested
Published on

ಬೆಂಗಳೂರು: ಪಬ್‌ನಲ್ಲಿ ಟಿ20 ಕ್ರಿಕೆಟ್ ಪಂದ್ಯಾವಳಿ ನೋಡುವಾಗ ಪಾಕಿಸ್ತಾನಕ್ಕೆ ಜೈಕಾರ ಕೂಗಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

ಗುರಪ್ಪನಪಾಳ್ಯ ನಿವಾಸಿಗಳಾದ ಇನಾಯತ್ ಉಲ್ಲಾ ಖಾನ್ ಮತ್ತು ಸೈಯದ್ ಮುಬಾರಕ್ ಬಂಧಿತರು. ಮತ್ತಿಬ್ಬರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಡಿ.1ರಂದು ಜೆ.ಪಿ.ನಗರದ ಪಬ್‌ನಲ್ಲಿ ಗ್ರಾಹಕರಿಗೆ ಭಾರತ ಮತ್ತು ಆಸ್ಟ್ರೇಲಿಯಾ ಟಿ-20 ಪಂದ್ಯಾವಳಿ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರು. ರಾತ್ರಿ 10.30ರಲ್ಲಿ ಸಂಗೀತ ಕಾರ್ಯಕ್ರಮ ಮುಗಿದ ಮೇಲೆ ಗ್ರಾಹಕನೊಬ್ಬ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ. ಪ್ರತಿಯಾಗಿ ಆರೋಪಿತರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರು.

ಇದರಿಂದ ಸಾರ್ವಜನಿಕ ಸ್ಥಳದಲ್ಲಿ ಧರ್ಮಗಳ ಮತ್ತು ವರ್ಗಗಳ ನಡುವೆ ದ್ವೇಷ, ವೈರತ್ವಕ್ಕೆ ಪ್ರಚೋದನೆ ನೀಡಿದರು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಎಂದಿದ್ದಾರೆ ಎಂದು ದೂರಿನಲ್ಲಿ ಪಬ್ ವ್ಯವಸ್ಥಾಪಕ ಸುಧೀರ್ ಸಿಂಗ್ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net