ವಯನಾಡು ಉಪಚುನಾವಣೆ ಮತ ಎಣಿಕೆ: ಭಾರೀ ಅಂತರದ ಗೆಲುವಿಗೆ ಪ್ರಿಯಾಂಕಾ ಗಾಂಧಿ ಸನ್ನಿಹಿತ | Wayanad ByElection

Priyanka Gandhi
Published on

ನವದೆಹಲಿ: ವಯನಾಡು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ (Wayanad ByElection) ಮತ ಎಣಿಕೆ ಭರದಿಂದ ಸಾಗುತ್ತಿದ್ದು, ಕ್ಷೇತ್ರದ ಜನರಲ್ಲಿ ಕುತೂಹಲ ಗರಿಗೆದರಿದೆ. ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಅಭ್ಯರ್ಥಿ ಸತ್ಯನ್ ಮೊಕೇರಿ ಮತ್ತು ಎನ್​ಡಿಎ ಅಭ್ಯರ್ಥಿ ನವ್ಯಾ ಹರಿದಾಸ್‌ ವಿರುದ್ಧ ಭರ್ಜರಿ ಪೈಪೋಟಿಗೆ ಇಳಿದಿರುವ ಪ್ರಿಯಾಂಕಾ, ಇದೀಗ ಭಾರೀ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಸಹೋದರ ರಾಹುಲ್​ ಗಾಂಧಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ಬೆನ್ನಲ್ಲೇ ತಮ್ಮ ಚೊಚ್ಚಲ ಪೈಪೋಟಿಯನ್ನು ವಯನಾಡಿನಿಂದ ಆರಂಭಿಸಿದ ವಾದ್ರಾಗೆ ಸದ್ಯ ಗೆಲುವಿನ ಸಿಹಿ ಕಾಣುವ ಮುನ್ಸೂಚನೆ ಲಭಿಸಿದೆ.

ಪ್ರಸ್ತುತ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, 1,48,554 ಮತಗಳನ್ನು ಪ್ರಿಯಾಂಕಾ ಪಡೆದುಕೊಂಡಿದ್ದಾರೆ. ಈ ಪೈಕಿ 86,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿರುವುದು ಗಮನಾರ್ಹ. ಅತ್ತ ವಯನಾಡು ಜನತೆ ಬಳಿ ಪ್ರಿಯಾಂಕಾ ಮಾಡಿಕೊಂಡಿದ್ದ ಮನವಿ ಫಲಿಸುವ ಲಕ್ಷಣಗಳು ಕಾಣಿಸುತ್ತಿದ್ದು, ಕೈ ನಾಯಕಿಗೆ ಗೆಲುವು ಸನ್ನಿಹಿತ ಎಂದೇ ಹೇಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net