'ನಾ ನಾಯಕಿ' ಸಮಾವೇಶ 'ನಾಲಾಯಕ್' ಕಾರ್ಯಕ್ರಮವೆಂದು ವ್ಯಂಗ್ಯವಾಡಿದ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ

ಅಶ್ವತ್ಥ ನಾರಾಯಣ್
Published on

ಬೆಂಗಳೂರು: ಪ್ರಿಯಾಂಕಾ ಗಾಂಧಿಯವರಿಗಾಗಿ ಬೆಂಗಳೂರಿನಲ್ಲಿ ಏರ್ಪಡಿಸಿರುವ 'ನಾ ನಾಯಕಿ' ಕಾರ್ಯಕ್ರಮ ಅಲ್ಲ, ನಾಲಾಯಕ್ ಕಾರ್ಯಕ್ರಮ ಎಂದು ಉನ್ನತ ಶಿಕ್ಷಣ ಸಚಿವ, ಪಕ್ಷದ ವಿಜಯ ಸಂಕಲ್ಪ ಅಭಿಯಾನ ರಾಜ್ಯ ಸಂಚಾಲಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವ್ಯಂಗ್ಯವಾಡಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಉತ್ತರಪ್ರದೇಶದ ಜನರಿಂದ ತಿರಸ್ಕೃತರಾದವರು, ಅಲ್ಲಿನ ಚುನಾವಣೆಯಲ್ಲಿ ಸಿಂಗಲ್ ಡಿಜಿಟ್​​ ಗಳಿಕೆಗೆ ತೃಪ್ತರಾದವರು. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಡತೆಯಿಲ್ಲ, ದಿಟ್ಟ ನಾಯಕತ್ವವೂ ಇಲ್ಲ. ದೇಶದಲ್ಲಿ ಆ ಪಕ್ಷವೇ ಅಪ್ರಸ್ತುತವಾಗಿದ್ದು, ರಾಜ್ಯದ ಚುನಾವಣೆಯಲ್ಲಿ ಆ ಪಕ್ಷದ ಸ್ತಾನ ಗಳಿಕೆ ಇನ್ನಷ್ಟು ಕುಸಿಯಲಿದೆ ಎಂದು ಭವಿಷ್ಯ ನುಡಿದರು.

ನಡ್ಡಾ ಚಾಲನೆ
ರಾಜ್ಯದಲ್ಲಿ ಜ.21 ರಿಂದ 29ರವರೆಗೆ‌ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜ.21ರಂದು ಈ ಅಭಿಯಾನವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಪಕ್ಷದ ರಾಜ್ಯಾಧ್ಯಕ್ಷ ಇನ್ನಿತರರು ಪಾಲ್ಗೊಳ್ಳಲಿದ್ದು, 50 ಸಾವಿರ ಜನರು ಸೇರುವ‌ ನಿರೀಕ್ಷೆಯಿದೆ.

ಅಭಿಯಾನ ಅವಧಿಯಲ್ಲಿ ರಾಜ್ಯಾದ್ಯಂತ ಏಕಕಾಲಕ್ಕೆ ಪಕ್ಷದ 38 ಸಂಘಟನಾತ್ಮಕ ಜಿಲ್ಲೆಗಳು, 312 ಮಂಡಲಗಳಯ, 58 ಸಾವಿರ ಬೂತ್ ಗಳಲ್ಲಿ ಸರ್ಕಾರದ ಸಾಧನೆ ತಿಳಿಸುವ ಬಿಜೆಪಿಯೇ ಭರವಸೆ ಘೋಷವಾಕ್ಯದಡಿ ಕರಪತ್ರ ಹಂಚಿಕೆ, ಗೋಡೆಬರಹ, ಫಲಾನುಭವಿಗಳ ಜತೆ ಚರ್ಚೆ, ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸುವುದು ಮತ್ತಿತರ ಚಟುವಟಿಕೆಗಳು ನಡೆಯಲಿವೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net