

ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ, ಕುಟುಂಬದ ಜತೆ ಬ್ಯುಸಿಯಾಗಿರುವ ನಟಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಆಗಾಗ್ಗೆ ತನ್ನ Instagram ಪೋಸ್ಟ್‌ಗಳ ಮೂಲಕ ತನ್ನ ದೈನಂದಿನ ಜೀವನದ ಒಂದು ನೋಟವನ್ನು ಹಂಚಿಕೊಳ್ಳುತ್ತಾರೆ.
ಪ್ರಿಯಾಂಕಾ ನಿಕ್ ಜೋನಾಸ್ ಜೊತೆಗಿನ ಫೋಟೋ ಜೊತೆಗೆ ಕುಟುಂಬದೊಂದಿಗಿನ ಪಿಕ್ನಿಕ್ ಫೋಟೋ, ದಿ ಬ್ಲಫ್ ಚಿತ್ರೀಕರಣದ ಸಮಯದ ಫೋಟೋವನ್ನೂ ನಟಿ ಹಂಚಿಕೊಂಡಿದ್ದಾರೆ. ಆದರೆ, ಎಲ್ಲರ ಗಮನ ಸೆಳೆದಿದ್ದು ಕಡೆಯಲ್ಲಿ ಆಕೆ ಹಂಚಿಕೊಂಡ ಪಾದಗಳಿಗೆ ಬೆಳ್ಳುಳ್ಳಿ ತಿಕ್ಕುವ ವಿಡಿಯೋ.
ನಿಕ್ ಜೋನಾಸ್ ಮೊದಲ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ತಾಯಿ ಮಧು ಚೋಪ್ರಾ ಸೇರಿದಂತೆ ಸಣ್ಣ ಕುಟುಂಬ ಪ್ರವಾಸದಂತೆಯೇ ಕಾಣುವ ಸ್ನ್ಯಾಪ್‌ಗಳು ಸಹ ಇವೆ. ಪ್ರಿಯಾಂಕಾ ತನ್ನ ಹೊಸ ಚಿತ್ರ ದಿ ಬ್ಲಫ್‌ನ ಸೆಟ್‌ನಲ್ಲಿ ಅನುಭವಿಸಿದ ತನ್ನ ಕಾಲುಗಳ ಮೇಲಿನ ಗಾಯದ ಗುರುತುಗಳನ್ನು ಸಹ ತೋರಿಸಿದ್ದಾರೆ. ಒಂದು ವಿಡಿಯೋದಲ್ಲಿ ಪ್ರಿಯಾಂಕಾ ಮೊಣಕಾಲಿನ ಕೆಳಗೆ ಕೆಂಪು ಗುರುತು ತೋರಿಸಿದ್ದಾರೆ. ಮತ್ತೊಂದು ವೀಡಿಯೊದಲ್ಲಿ ಆಕೆಯ ಪಾದಗಳ ಕ್ಲೋಸ್-ಅಪ್ ಇದ್ದು, ಅಲ್ಲಿ ಬೇರೊಬ್ಬರು ಆಕೆಯ ಪಾದಗಳ ಕೆಳಗೆ ಬೆಳ್ಳುಳ್ಳಿ ಉಜ್ಜುತ್ತಿರುವುದನ್ನು ಕಾಣಬಹುದು.
'ಬೆಳ್ಳುಳ್ಳಿಯು ಪಾದಗಳಿಗೆ ಏನು ಮಾಡುತ್ತದೆ?' ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ನಟಿ, 'ಉರಿಯೂತ ಮತ್ತು ಜ್ವರಕ್ಕೆ ಸಹಾಯ ಮಾಡುತ್ತದೆ' ಎಂದು ತಿಳಿಸಿದ್ದಾರೆ. ಉರಿ, ನೋವು ಗಾಯಗಳಿಗೆ ದೇಸೀ ಮನೆಮದ್ದಿನ ಮೊರೆ ಹೋಗಿರುವ ಪ್ರಿಯಾಂಕಾ ಚೋಪ್ರಾಗೆ ಭಾರತೀಯ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈ ಕಾರಣಕ್ಕೆ ಪೀಸೀ ಪಕ್ಕಾ ದೇಸೀ ಎಂದು ಹೇಳಿದ್ದಾರೆ.