ಅವರ ಪ್ರೇಯಸಿಗಾಗಿ ನನ್ನ ಅವಕಾಶ ಕಿತ್ತುಕೊಂಡ್ರು! ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ

WhatsApp Image 2024-04-27 at 7.51.17 PM
Published on

ಮುಂಬೈ: 'ಕ್ರಿಶ್​', 'ದೋಸ್ತಾನ' ಹೀಗೆ ಮುಂತಾದ ಸೂಪರ್​ಡೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿ, ಸಿನಿಪ್ರೇಕ್ಷಕರಿಂದ ಅಪಾರ ಮೆಚ್ಚುಗೆ, ಖ್ಯಾತಿ ಗಳಿಸಿದ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ತನಗೆ ಚಿತ್ರರಂಗದಲ್ಲಿ ಉಂಟಾದ ಸಂಕಷ್ಟಗಳು, ರಿಜೆಕ್ಷನ್​ಗಳ ಬಗ್ಗೆ ಶಾಕಿಂಗ್ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಪ್ರಸ್ತುತ 'ಹೆಡ್​ ಆಫ್​ ಸ್ಟೇಟ್'​ ಚಿತ್ರದ ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಪ್ರಿಯಾಂಕಾ, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತನಗೆ ಒಲಿದುಬಂದ ಅವಕಾಶಗಳನ್ನು ಹೇಗೆ ಕಸಿದುಕೊಳ್ಳುತ್ತಿದ್ದರು, ಯಾವ ಕಾರಣಕ್ಕಾಗಿ ಕಿತ್ತುಕೊಳ್ಳುತ್ತಿದ್ದರು ಎಂಬುದನ್ನು ಅಭಿಮಾನಿಗಳ ಎದುರು ಬಟಾಬಯಲು ಮಾಡಿದ್ದಾರೆ.

"ನಾನು ಚಿತ್ರರಂಗಕ್ಕೆ ಬಂದ ಮೊದಲ ದಿನದಿಂದಲೂ ಈ ರಿಜೆಕ್ಷನ್ ಎಂಬುದನ್ನು ನೋಡುತ್ತಲೇ ಬಂದಿದ್ದೇನೆ. ಈ ಪದ ಕೇಳಿದಾಗಲೆಲ್ಲಾ ಬಹಳ ಸಂಕಟವಾಗುತ್ತಿತ್ತು. ಕೆಲಸ ಮಾಡಲೆಂದು ಉತ್ಸಾಹದಿಂದ ಎದುರು ನೋಡುತ್ತಿದ್ದಾಗಲೇ ಇಂತಹ ರಿಜೆಕ್ಷನ್​ಗಳು ತುಂಬ ಆಘಾತ ಉಂಟುಮಾಡುತ್ತಿತ್ತು. ನನ್ನ ಕೈಬಿಡಲು ನಾನು ಆ ಪಾತ್ರಕ್ಕೆ ಸರಿಯಿಲ್ಲ ಎಂದೋ ಅಥವಾ ಅವರ ಪ್ರೇಯಸಿಗೆ ಆ ಪಾತ್ರ ಕೊಡಿಸಲು ನಮ್ಮನ್ನು ಹೊರ ಹಾಕುತ್ತಿದ್ದರೋ ಗೊತ್ತಿಲ್ಲ. ಆದರೆ, ಇಂತಹ ಹಲವು ಕಾರಣಗಳು ನಮ್ಮನ್ನು ರಿಜೆಕ್ಟ್ ಮಾಡಲು ಮುಂದಿದ್ದವು" ಎಂದು ಹೇಳಿದ್ದಾರೆ.

"ಅವರಿಗೆ ಯಾರು ಹಿಡಿಸುತ್ತಾರೋ ಅಂತವರಿಗೆ ಅವಕಾಶ ಕೊಡುವುದು ಹೀಗೆ ಏನೇನೋ ಮಾಡಿದ್ದಾರೆ. ಆದರೆ, ನಾನು ಅಂದೇ ದೃಢವಾಗಿ ಸಂಕಲ್ಪ ಮಾಡಿಕೊಂಡೆ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು, ಮುನ್ನುಗ್ಗುತ್ತಿರಬೇಕು ಎಂದು. ಆ ದಿನವೇ ನನಗೆ ನಾನು ಮಾಡಿಕೊಂಡ ಶಪಥ ಇದು. ಇಂದು ಅದರಿಂದ ಸಂಪೂರ್ಣವಾಗಿ ನೆಮ್ಮದಿಯಾಗಿದ್ದೇನೆ. ಇಂತಹ ರಿಜೆಕ್ಷನ್​ಗಳಿಗೆ ಕಿಂಚಿತ್ತು ಯೋಚಿಸಲ್ಲ ನಾನು" ಎಂದು ಬೋಲ್ಡ್​ ಆಗಿ ನುಡಿದಿದ್ದಾರೆ ಪ್ರಿಯಾಂಕಾ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net