ಎರಡು ದಶಕಗಳ ಬಳಿಕ ಮತ್ತೆ ಒಂದಾದ ಪ್ರಿಯಾಂಕ ಛೋಪ್ರಾ-ಪ್ರೀತಿ ಝಿಂಟಾ!

pp mix
Published on

'ದಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ನಂತರ, ಪ್ರಿಯಾಂಕಾ ಚೋಪ್ರಾ ಮತ್ತು ಪ್ರೀತಿ ಜಿಂಟಾ ಮತ್ತೆ ಒಟ್ಟಿಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಈ ಜೋಡಿ ಇದೀಗ ಮತ್ತೆ ಒಂದಾಗಿದೆ. 2003 ರಲ್ಲಿ ಕೊನೆಯ ಬಾರಿ ಜೊತೆಯಾಗಿ ಕಾಣಿಸಿಕೊಂಡ ಜೋಡಿ ಇದೀಗ ಮತ್ತೆ ಒಂದಾಗಿದೆ.


ಈ ನಟಿಯರು ಒಟ್ಟಿಗೆ ನಟಿಸುವುದರಲ್ಲಿ, ಸ್ನೇಹಕ್ಕೆ ಹೆಸರುವಾಸಿಯಾಗಿದ್ದಾರೆ. ಆದರೂ ಸುಮಾರು ವರ್ಷಗಳ ಕಾಲ ಸಾರ್ವಜನಿಕವಾಗಿ ಅಭಿಮಾನಿಗಳ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ ಪ್ರೀತಿ ಜಿಂಟಾ ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ.


ಈ ಜೋಡಿಯು ಚಲನಚಿತ್ರ ಭ್ರಾತೃತ್ವದಲ್ಲಿ ಉತ್ತಮ ಸ್ನೇಹಕ್ಕಾಗಿ ಹೆಸರುವಾಸಿಯಾಗಿದೆ ಮತ್ತು ಇತ್ತೀಚೆಗೆ ಅವರು ಜೋನಾಸ್ ಬ್ರದರ್ಸ್ ಕನ್ಸರ್ಟ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.


ವಿಡಿಯೋದಲ್ಲಿ ಮತ್ತೆ ಒಟ್ಟಾಗಿರುವುದು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅದರಲ್ಲೂ ಪ್ರಿಯಾಂಕ್ ಛೋಪ್ರಾ ಧರಿಸಿರುವ ಕಪ್ಪು ಬಣ್ಣದ ಔಟ್ ಕಟ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ಬಗ್ಗೆಯೇ ಅಭಿಮಾನಿಗಳು ಇನ್ಸ್ಟಾಗ್ರಾಂನಲ್ಲಿ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.


ಪ್ರೀತಿ ಜಿಂಟಾ ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಜೋನಾಸ್ ಬ್ರದರ್ಸ್ ಸಂಗೀತ ಕಾರ್ಯಕ್ರಮಕ್ಕೆ ಹಾಜರಾಗುವುದನ್ನು ಕಾಣಬಹುದು. ವಿಡಿಯೋದಲ್ಲಿ ಮತ್ತೆ ಒಟ್ಟಾಗಿರುವುದು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net