ಪ್ರಿಯಾಂಕಾ ಚೋಪ್ರಾಗೆ ಇಂಗ್ಲಿಷ್ ಬರುವುದಿಲ್ಲವೇ? ಫ್ಯಾನ್ಸ್​​ ಇಂಗ್ಲಿಷ್ ಪಾಠ ಮಾಡುವಷ್ಟು ತಪ್ಪು ಮಾಡಿದ ನಟಿ!

Priyanka Chopra
Published on

ಮುಂಬೈ: ಬಾಲಿವುಡ್​​ ನಟಿ ಪ್ರಿಯಾಂಕಾ ಚೋಪ್ರಾ ಒಂದಲ್ಲಾವೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಪ್ರಿಯಾಂಕಾ ಇಂಗ್ಲಿಷ್ ಭಾಷೆಯಿಂದ ಟ್ರೋಲ್​​ಗೆ ಒಳಗಾಗಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ತನ್ನ ನೋಟ ಮತ್ತು ಅವರ ಜೀವನಶೈಲಿಗಾಗಿ ಪ್ರತಿದಿನ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಒಂದು ತಪ್ಪಿನಿಂದಾಗಿ ದೇಸಿ ಹುಡುಗಿ ಸೋಷಿಯಲ್ ಮೀಡಿಯಾದಲ್ಲಿ  ಟ್ರೋಲ್​​ ಆಗುತ್ತಿದ್ದಾರೆ.

priyanka chopra

ಹಾಸ್ಯ ನಟ ವೀರ್ ದಾಸ್ ಅವರ ನೆಟ್‌ಫ್ಲಿಕ್ಸ್ ಸ್ಟ್ಯಾಂಡ್-ಅಪ್ ಶೋ ವೀರ್ ದಾಸ್ ಹಾಸ್ಯ ವಿಭಾಗದಲ್ಲಿ ಇಂಟರ್ನ್ಯಾಷನಲ್ ಎಮ್ಮಿ 2023 ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ವೀರ್ ದಾಸ್ ಈಗ ಪ್ರಪಂಚದಾದ್ಯಂತ ಅನೇಕ ಶುಭ ಹಾರೈಕೆಗಳನ್ನು ಪಡೆಯುತ್ತಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಕೂಡ ಅವರನ್ನು ಅಭಿನಂದಿಸಿದ್ದಾರೆ.

ನಟಿ ಬೀರ್ ದಾಸ್ ಮನೆಗೆ  ಒಂದು ಪತ್ರ ಜತೆ ಹೂಗುಚ್ಛವನ್ನು ಕಳುಹಿಸಿದ್ದಾರೆ. ಅದರ ಫೋಟೋಗಳನ್ನು ವೀರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀರ್ ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಪ್ರಿಯಾಂಕಾ ಚೋಪ್ರಾಗೆ ಧನ್ಯವಾದ ಹೇಳಿದ್ದಾರೆ.ಈ ವೇಳೆ ಅಭಿಮಾನಿಗಳ ಕಣ್ಣು ಪ್ರಿಯಾಂಕಾ ಚೋಪ್ರಾ ಬರೆದಿರುವ ಪತ್ರದ ಮೇಲೆ ಬಿದ್ದಿದೆ.  ಪ್ರಿಯಾಂಕಾ ಚೋಪ್ರಾ ಅವರು ಆತ್ಮೀಯ ವೀರ್, ಎಮ್ಮಿ ಪ್ರಶಸ್ತಿಯನ್ನು ಪಡೆದಿದ್ದಕ್ಕಾಗಿ ನಿಮಗೆ ಅಭಿನಂದನೆಗಳು ಎಂದು ಬರೆದು ನಾಲ್ಕು ಸಾಲುಗಳನ್ನು ಇಂಗ್ಲೀಷ್​ನಲ್ಲಿ ಬರೆದಿದ್ದಾರೆ. ಈ ಪತ್ರದಲ್ಲಿ ಶಾಖಷ್ಟು ಗ್ರಾಮೆಟಿಕಲ್​ ಮಿಸ್ಟೆಕ್​​ ನೋಡಿದ್ದಾರೆ. ಪ್ರಿಯಾಂಕಾ  ವ್ಯಾಕರಣ ತಪ್ಪಿನಿಂದಾಗಿ ಟ್ರೋಲ್ ಆಗುತ್ತಿದ್ದಾರೆ.

'ಅಭಿನಂದನೆಗಳು, 'an' ಬದಲಿಗೆ 'a' ಅನ್ನು ಬಳಸಬೇಕಿತ್ತು. ಚೆನ್ನಾಗಿದೆ ಆದರೆ ಇದನ್ನು ಯಾರು ಬರೆದಿದ್ದಾರೆ? ದೊಡ್ಡ ಅಭಿನಂದನೆಗಳು. ಅದೇ ರೀತಿ ‘ಎ’ ಬದಲು ‘ಅನ್ ಹ್ಯೂಜ್ ಕಂಗ್ರಾಚ್ಯುಲೇಷನ್ಸ್’ ಎಂದು ಬರೆದು ಜನ ಟ್ರೋಲ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net