More

    ಅವಳಿ ಮಕ್ಕಳಿಗೆ ಜನ್ಮ ನೀಡಿದ 70 ವರ್ಷದ ಮಹಿಳೆ

    ಉಗಾಂಡಾ: ಸಾಮಾನ್ಯವಾಗಿ 45 ವರ್ಷಗಳ ನಂತರ ಹೆರಿಗೆ ಮಾಡುವುದು ಕಷ್ಟ ಎಂದು ಹೇಳಲಾಗುತ್ತದೆ. ಆದರೆ ಕೆಲವು ಅಪರೂಪದ ಘಟನೆಗಳು ವಿಶೇಷವಾಗುತ್ತವೆ. 70 ವರ್ಷದ ಉಗಾಂಡಾದ ಮಹಿಳೆ ಸಫಿನಾ ನಮುಕ್ವಾಯಾ ಅವರು ಇತ್ತೀಚೆಗೆ ದೇಶದ ರಾಜಧಾನಿ ಕಂಪಾಲಾದಲ್ಲಿ (ಐವಿಎಫ್) ಗರ್ಭಕೋಶಕ್ಕೆ ವೀರ್ಯ ಸೇರ್ಪಡೆ ಮಾಡುವ ಚಿಕಿತ್ಸೆಯ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಉಗಾಂಡಾದಲ್ಲಿ ಮಹಿಳೆಯೊಬ್ಬರು ಒಂದೇ ಬಾರಿಗೆ 70ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಉಗಾಂಡಾದ ಮಹಿಳೆ ಸಫೀನಾ ನಮುಕ್ವಾಯಾ ಅವರು ತಮ್ಮ 70 ನೇ ವಯಸ್ಸಿನಲ್ಲಿ ತಾಯಿಯಾಗುವ ಕನಸನ್ನು ನನಸಾಗಿಸಿದೆ.

    70 ವರ್ಷ ವಯಸ್ಸಿನವರು ಸಾಮಾನ್ಯವಾಗಿ ಗರ್ಭಧರಿಸಲು ಸಾಧ್ಯವಿಲ್ಲ. ಇದರ ಫಲವಾಗಿ ಐವಿಎಫ್ ಮೂಲಕ ಗರ್ಭ ಧರಿಸಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಉಗಾಂಡಾದ ಕಂಪಾಲಾದ ಆಸ್ಪತ್ರೆಯಲ್ಲಿ ಬುಧವಾರ ( 2023 ನವೆಂಬರ್ 29) ನಫೀನಾ ಒಂದು ಹೆಣ್ಣು ಮತ್ತು ಗಂಡು ಮಗುವಿಗೆ ಜನ್ಮ ನೀಡಿದರು.

    View this post on Instagram

    A post shared by BBC News (@bbcnews)

    ಆಕೆಗೆ ಹೆರಿಗೆ ಮಾಡಿದ ಡಾ.ಎಡ್ವರ್ಡ್ ಮಾತನಾಡಿ, ಈ ವಯಸ್ಸಿನಲ್ಲಿ ಇದೊಂದು ಪವಾಡ. ಸಿಸೇರಿಯನ್ ಮೂಲಕ ಸಫೀನಾ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದು ಸಂತಾನೋತ್ಪತ್ತಿ ವಿಧಾನಗಳ ಮೂಲಕ ಆಫ್ರಿಕಾದಲ್ಲಿ ಜನ್ಮ ನೀಡಿದ ಅತ್ಯಂತ ಹಿರಿಯ ಮಹಿಳೆಯಾಗಿದ್ದಾರೆ.

    ಸಫೀನಾ ಅವರ ಮೊದಲ ಪತಿ 1992 ರಲ್ಲಿ ನಿಧನರಾದರು. ನಾಲ್ಕು ವರ್ಷಗಳ ನಂತರ, ಅವರು ಎರಡನೇ ಬಾರಿಗೆ ವಿವಾಹವಾದರು. ಅವರಿಗೆ 20 ವರ್ಷವಾದರೂ ಮಕ್ಕಳಾಗಿರಲಿಲ್ಲ. 2020 ರಲ್ಲಿ, ಸಫೀನಾ ಮಗುವಿಗೆ ಜನ್ಮ ನೀಡಿದ್ದರು. ಆದರೆ ಅವರಿಗೆ ಆ ಮಗು ಬದುಕಿ ಉಳಿಯಲಿಲ್ಲ. ಇದರಿಂದ ತಾಯಿಯಾಗುವ ಆಸೆ ಈಡೇರಲಿಲ್ಲ. ಆದರೆ ಅಂತಿಮವಾಗಿ, 70 ನೇ ವಯಸ್ಸಿನಲ್ಲಿ, ಅವರು ಮತ್ತೊಮ್ಮೆ ಐವಿಎಫ್ ಮೂಲಕ ಅವಳಿಗಳಿಗೆ ಜನ್ಮ ನೀಡಿದ್ದಾರೆ. ಅವಳಿ ಮಕ್ಕಳು- ತಾಯಿ ಆರೋಗ್ಯವಾಗಿದ್ದಾರೆ.

    IVF ಚಿಕಿತ್ಸೆ ಮೂಲಕ ಮಗುವನ್ನು ಹೇಗೆ ಪಡೆಯುವುದು?:  IVF ಎಂದು ಕರೆಯಲ್ಪಡುವ ಚಿಕಿತ್ಸೆ ನಿಮಗೆ ಗರ್ಭಿಣಿಯಾಗಲು ಸಹಾಯ ಮಾಡುವ ಒಂದು ವಿಧಾನವಾಗಿದೆ. IVF ನಲ್ಲಿ, ಪ್ರಯೋಗಾಲಯದಲ್ಲಿ ಮಾನವ ವೀರ್ಯದೊಂದಿಗೆ ಫಲವತ್ತಾಗಿಸಿ ನಂತರ ಗರ್ಭಾಶಯಕ್ಕೆ ಅಳವಡಿಸಲಾಗುತ್ತದೆ. ಫಲವತ್ತಾದ ಭ್ರೂಣ ಯಶಸ್ವಿಯಾಗಿ ಗರ್ಭಾಶಯದಲ್ಲಿ ಅಳವಡಿಸಿದರೆ, ಇದು ಗರ್ಭಾವಸ್ಥೆಯಲ್ಲಿ ಕಾರಣವಾಗುತ್ತದೆ.
    https://www.vijayavani.net/new-world-record-set-for-grilled-cheese-sandwich-by-two-young-kids-from-the-us

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts