ಉಡುಪಿ ವಿವಾದ | ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಡಿಯೋವನ್ನು ಬಿಜೆಪಿಯವರು ತೋರಿಸಲಿ: ಪ್ರಿಯಾಂಕ್ ಖರ್ಗೆ

Priyank kharge
Published on

ಬೆಂಗಳೂರು: ಉಡುಪಿ ವಿಚಾರ ಭುಗಿಲೆದ್ದಿದ್ದು, ಈ ಕುರಿತಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ವಾಗ್ದಾಳಿಯಲ್ಲಿ ತೊಡಗಿದ್ದಾರೆ. ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಉಡುಪಿ ಟಾಯ್ಲೆಟ್​ ವಿಡಿಯೋ ಪ್ರಕರಣದ ಕುರಿತಾಗಿ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, "ಉಡುಪಿ ವಿಡಿಯೋ ಪ್ರಕರಣದ ಬಗ್ಗೆ ಅವರು ಯಾರನ್ನು ನಂಬುತ್ತಾರೆ ಅಂತ ಬಿಜೆಪಿಗರು ಡಿಸೈಡ್ ಮಾಡಬೇಕು. ಬಿಜೆಪಿ ಕಾಲದ ಅಧಿಕಾರಿಗಳು ಈಗಲೂ ಅಲ್ಲೆ ಇದ್ದಾರೆ ಯಾವುದೇ ರೀತಿಯ ಕ್ರಿಮಿನಲ್ ಇಂಟೆಂಟ್ ಇರಲಿಲ್ಲ, ಯಾವುದೇ ವಿಡಿಯೋ ಕ್ಯಾಮರಾ ಇರಲಿಲ್ಲ, ಎಲ್ಲೂ ವಿಡಿಯೋ ಸಿಕ್ಕಿಲ್ಲ. ಇದನ್ನು ಖುಷ್ಬು ಕೂಡ ಪುನರುಚ್ಚಾರ ಮಾಡಿದ್ದಾರೆ.

ಇದೀಗ ವಿಡಿಯೋ ಓಡಾಡುತ್ತಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಹಾಗಿದ್ರೆ ಅವರು ವಿಡಿಯೋ ತೊರಿಸಲಿ, ಯಾವ ಸಮಾಜಿಕ ಜಾಲತಾಣದಲ್ಲಿದೆ ಎಂದು. ವಿಡಿಯೋ ಮಾತ್ರ ಸಿಕ್ತಾ ಇಲ್ಲ. ಬಿಜೆಪಿಗರು ವಿಷಯಾಧಾರಿತ ಚರ್ಚೆ ಮಾಡುತ್ತಿಲ್ಲ. ವರ್ಗಾವಣೆ ದಂಧೆ ಅಂದ್ರು, ಪೆನ್ ಡ್ರೈವ್ ಇದೆ ಅಂದ್ರು. ಆದರೆ ಯಾವುದೇ ವಿಚಾರಗಳು ಬಿಜೆಪಿಗೆ ಸಿಕ್ತಾ ಇಲ್ಲ.

ಬಿಜೆಪಿಯಲ್ಲಿ ಯಾವಾಗ ಗೊಂದಲಗಳು ಆಗುತ್ತಾವೋ ಇಂತಹ ವಿಚಾರ ಎತ್ತುತ್ತಾರೆ. ಮೊದಲನೆ ಸಾರಿ ಬಿಜೆಪಿ ಹೀಗೆ ಮಾಡುತ್ತಿರುವುದಲ್ಲ. ಆಜಾನ್, ಹಲಾಲ್, ಜಟ್ಕಾ ಕಟ್ ಏನಾದ್ವು? ಕೇಸರಿ ಶಾಲು ಹಾಕಿಸಿ ವಿಧ್ಯಾರ್ಥಿಗಳನ್ನು ಕರೆದುಕೊಂಡು ಹೊದ್ರು. ಬಿಜೆಪಿ ಆಲೋಚನೆಯಲ್ಲೇ ಒಮ್ಮೆ ಆತ್ಮಾವಲೋಕನ ಮಾಡಬೇಕು. ದಯವಿಟ್ಟು ನಮಗೆ ಆಡಳಿತ ಮಾಡಲು ಅವಕಾಶ ನೀಡಬೇಕು. ಮೊದಲು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿ

ಆಡಳಿತದಲ್ಲಿ ಲೋಪ‌ ಇದ್ರೆ ತೊರಿಸಲಿ. ನಿಜವಾದ ಪ್ರತಿಭಟನೆ ಮಾಡುವುದಾದರೆ ನನಗೆ ಸಹಾಯ ಮಾಡಲಿ. ಕೇಂದ್ರ ಸರ್ಕಾರದಿಂದ ನನ್ನ ಇಲಾಖೆಗೆ 1300 ಕೋಟಿ ರೂ. ಬರಬೇಕು. ಉದ್ಯೋಗ ಖಾತ್ರಿ ಯೋಜನೆಗೆ ಬರಬೇಕು ಅದನ್ನು ಕೊಡಿಸಿ.

ಈ ಪ್ರತಿಭಟನೆಗೆ ಬಿಜೆಪಿ ಬರುತ್ತಾ ಬರಲ್ಲ? ಬಿಜೆಪಿ ಅವರು ಅಸ್ತಿತ್ವ ಉಳಿಸಿಕೊಳ್ಳಲು ಈ ಪ್ರತಿಭಟನೆ ಮಾಡುತ್ತಿದ್ದಾರೆ" ಎಂದು ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net