ಥಾಯ್ಲೆಂಡ್ ಪ್ರವಾಸದ ಫೋಟೋ ಹಂಚಿಕೊಂಡ ಪ್ರಿಯಾ ವಾರಿಯರ್; ಮತ್ತೊಮ್ಮೆ ಕ್ಲೀನ್ ಬೌಲ್ಡ್ ಆದ ಅಭಿಮಾನಿಗಳು

Priya
Published on

ಬೆಂಗಳೂರು: ಪ್ರಿಯಾ ವಾರಿಯರ್ ಕಣ್ಣು ಹೊಡೆದ ಸ್ಟೈಲ್​ಗೆ ಅಭಿಮಾನಿಗಳು ಕ್ಲೀನ್​ ಬೌಲ್ಡ್​ ಆಗಿದ್ದರು. ಇದೀಗ ಪ್ರಿಯಾ ವಾರಿಯರ್ ಥೈಲ್ಯಾಂಡ್​ ಪ್ರವಾಸದ ಫೋಟೋ ನೋಡಿ ಅಭಿಮಾನಿಗಳು ಮತ್ತೊಮ್ಮೆ ಕ್ಲೀನ್​​ ಬೌಲ್ಡ್ ಆಗಿದ್ದಾರೆ.

ಮಲಯಾಳಂ ಭಾಷೆಯಲ್ಲಿ 2019ರಲ್ಲಿ ತೆರೆಕಂಡ ಒರು ಅಡಾರ್ ಲವ್​ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾ ವಾರಿಯರ್​ ಕಣ್ಣು ಹೊಡೆಯುವ ಮೂಲಕ ಫೇಮಸ್​ ಆದವರು. ಇದೀಗ ಪ್ರಿಯಾ ವಾರಿಯರ್​ ಥಾಯ್ಲೆಂಡ್​ ಪ್ರವಾಸ ಹೋಗಿದ್ದಾರೆ. ಅಷ್ಟೇ ಅಲ್ಲಾ, ತಮ್ಮ ಥಾಯ್ಲೆಂಡ್ ಪ್ರವಾಸದ ಫೋಟೋಗಳನ್ನು ಇನ್ಸ್​ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಿಯಾ ವಾರಿಯರ್ ತಾವು ಥಾಯ್ಲೆಂಡ್ ಹಾಗೂ ಬ್ಯಾಂಕಾಕ್​ನಲ್ಲಿ ಸುತ್ತಾಡಿದಾಗ ತೆಗೆದ ಬೋಲ್ಡ್​ ಫೋಟೋಗಳನ್ನು ನೋಡುತ್ತಿದ್ದಂತೆ ಮತ್ತೊಮ್ಮೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.

ಪ್ರಿಯಾ ವಾರಿಯಾರ್​ ಥಾಯ್ಲೆಂಡ್​ನಲ್ಲಿ ಟೈಗರ್​ ಪಾರ್ಕ್​ಗೆ ತೆರಳಿದ್ದಾರೆ. ಅಲ್ಲಿ ಹುಲಿಯನ್ನು ಮಾತನಾಡಿಸುತ್ತಿರುವ ವಿಡಿಯೋವನ್ನು ಕೂಡಾ ಶೇರ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net