ಬಾಲಿವುಡ್​ನ Vidya Balan ತಂಗಿ ಕನ್ನಡದ ಈ ಸ್ಟಾರ್ ನಟಿ! ಈಕೆ ಅಪ್ಪು, ದರ್ಶನ್​​ ಜತೆ ನಟಿಸಿದ ಸಿನಿಮಾಗಳು ಸೂಪರ್​ ಹಿಟ್​​...

priyamani
Published on

 ಬೆಂಗಳೂರು:  ನಟಿ ವಿದ್ಯಾ ಬಾಲನ್ ( Vidya Balan ) ಬಾಲಿವುಡ್​​ನಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಇವರ ಸಹೋದರಿ ಕೂಡಾ ಪ್ರಸ್ತುತ ಸೌತ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡುವುದರ ಜತೆ ಕನ್ನಡದ ಸ್ಟಾರ್​ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಯಾರು ಈ ನಟಿ ಎನ್ನುವ ಮಾಹಿತಿಯನ್ನು ನಾವು ಇಂದು ನಿಮಗೆ ತಿಳಿಸಿ ಕೊಡಲಿದ್ದೇವೆ...

ಪಂಚಭಾಷಾ ತಾರೆ ಪ್ರಿಯಾಮಣಿ ಹಾಗೂ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಸಂಬಂಧಿಕರು ಎನ್ನುವ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ. ದಶಕಗಳ ಹಿಂದೆಯೇ ಪ್ರಿಯಾಮಣಿ ಈ ವಿಚಾರ ಹೇಳಿದ್ದರು.

ಪ್ರಿಯಾಮಣಿ.ವಿದ್ಯಾ ಬಾಲನ್ ಮತ್ತು ಪ್ರಿಯಾಮಣಿ ಸಹೋದರಿಯರು. ವಿದ್ಯಾ ಬಾಲನ್ ಅವರು ತಮಿಳು ಕುಟುಂಬಕ್ಕೆ ಸೇರಿದವರು. ವಿದ್ಯಾ ಬಾಲನ್ ತಂದೆ ಪಿ ಆರ್ ಬಾಲನ್ ಅವರು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವಿದ್ಯಾರಿಗೆ ಪ್ರಿಯಾ ಎಂಬ ಅಕ್ಕ ಇದ್ದಾರೆ. ಪ್ರಿಯಾಮಣಿಗೆ ವಿದ್ಯಾ ಅವರು ಸಹೋದರ ಸಂಬಂಧಿ ಆಗುತ್ತಾರಂತೆ. ಈ ಕುರಿತು ಹಿಂದೊಮ್ಮೆ ಪ್ರಿಯಾಮಣಿ ಮಾತನಾಡಿದ್ದರು.

ವಿದ್ಯಾ ಬಾಲನ್ ಕುರಿತು 2010ರಲ್ಲಿ ಮಾತನಾಡಿದ್ದ ಪ್ರಿಯಾಮಣಿ ಅವರು "ವಿದ್ಯಾ ಅವರು ನಮ್ಮ ಕುಟುಂಬದವರು ಎಂದು ಹೇಳಲು ಹೆಮ್ಮೆಪಡುವೆ. ಅವರಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುವೆ. ನಾನು ಹಾಗೂ ವಿದ್ಯಾ ಸಹೋದರ ಸಂಬಂಧಿಗಳು, ಆದರೆ ವೈಯಕ್ತಿಕವಾಗಿ ನಮ್ಮಿಬ್ಬರ ಮಧ್ಯೆ ಸಂಪರ್ಕ ಇಲ್ಲ. ಆದರೆ ವಿದ್ಯಾ ತಂದೆ ಜೊತೆಗೆ ಆಗಾಗ ಮಾತನಾಡುತ್ತಿರುತ್ತೇನೆ. ಮುಂಬೈಗೆ ಬಂದಾಗ ಸಾಧ್ಯವಾದಾಗಲೆಲ್ಲ ಅವರ ತಂದೆಗೆ ಫೋನ್ ಮಾಡಿ ಮಾತನಾಡುತ್ತೇನೆ" ಎಂದು ಹೇಳಿಕೆ ನೀಡಿದ್ದರು.

ಪ್ರಿಯಾಮಣಿ ಅವರು ಜೂನ್ 4, 1984 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಪ್ರಿಯಾಮಣಿ ತನ್ನ ಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮಾಡಿದ್ದಾಳೆ. ಈ ಮುದ್ದಾದ ಹುಡುಗಿ ಶಾಲೆಯಲ್ಲಿ ಓದುವಾಗ ಜಾಹೀರಾತುಗಳಲ್ಲಿ ನಟಿಸಿದ್ದಳು. 2003 ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರದೊಂದಿಗೆ ಪ್ರಿಯಾಮಣಿ ತಮ್ಮ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸಿದರು. 2004 ರಲ್ಲಿ, ಅವರು ಪ್ರಸಿದ್ಧ ನಿರ್ದೇಶಕ ಭಾರತಿರಾಜ ನಿರ್ದೇಶನದ "ಕಾನ್ ನೀಲಾಲ್ ಅಯುತ್ ಸೆ" ಚಿತ್ರದ ಮೂಲಕ ತಮಿಳು ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.

ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಂತಹ ಹಲವಾರು ಭಾಷೆಗಳಲ್ಲಿ ನಟಿಸಿರುವ ಪ್ರಿಯಾಮಣಿ ಭಾರತೀಯ ಚಿತ್ರರಂಗದಲ್ಲೂ ಖಾಯಂ ಸ್ಥಾನ ಗಳಿಸಿದ್ದಾರೆ. ಮನೋಜ್ ಬಾಜಪೇಯಿ ಜೊತೆಗಿನ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿಯೊಂದಿಗೆ ಅವರು ಬಾಲಿವುಡ್‌ನಲ್ಲಿ ಕ್ರೇಜ್ ಆದರು. ಮದುವೆಯ ನಂತರವೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  ಕನ್ನಡದಲ್ಲಿ ಪುನೀತ್ ರಾಜಕುಮಾರ್ ರವರ ರಾಮ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ದರ್ಶನ್, ಅಪ್ಪು ಹಾಗೂ ಇನ್ನಿತರ ಸ್ಟಾರ್​ ನಟರ ಜತೆ ಈಕೆ  ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಿಯಾಮಣಿ ಅವರ ಪೂರ್ಣ ಹೆಸರು ಪ್ರಿಯಾ ವಾಸುದೇವ್ ಮಣಿ ಅಯ್ಯರ್. ಇವರು ತಮಿಳು ಬ್ರಾಹ್ಮಣರು.ಆದರೆ ಪ್ರೀತಿಗಾಗಿ ಪ್ರಿಯಾ ಧರ್ಮದ ಗೋಡೆಯನ್ನು ದಾಟಿ ಬೇರೆ ಧರ್ಮದವರನ್ನು ವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net