ವೇಮಗಲ್​ನಲ್ಲಿ ಖಾಸಗಿ ಹೆಲಿಕಾಪ್ಟರ್​ ಘಟಕ

klr air bus,webp
Published on

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ದೇಶ, ವಿದೇಶಿ ಕಂಪನಿಗಳ ಮಾಲೀಕರು ಜಿಲ್ಲೆಗೆ ಬಂದು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮುಂದಾಗುತ್ತಿರುವುದು ಸಂತಸ ಉಂಟು ಮಾಡಿದೆ. ಇದರ ಬೆನ್ನಲ್ಲೇ ಈಗ ಮತ್ತೊಂದು ಸಿಹಿ ಸುದ್ದಿ ಹೊರ ಬಿದ್ದಿದ್ದು, ಸ್ಥಳಿಯ ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

ತಾಲೂಕಿನ ವೇಮಗಲ್​ ಕೈಗಾರಿಕೆ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್​ ಉತ್ಪಾದನಾ ಟಕ ಸ್ಥಾಪನೆ ಮಾಡಲು ಮುಂದಾಗಿದ್ದು, ಸ್ಥಳಿಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ ಸೃಷ್ಟಿಸುವ ನಿರೀೆ ಹೆಚ್ಚಿದೆ. ವೇಮಗಲ್​ ಸಮೀಪ 2ನೇ ಹಂತದ ಕೈಗಾರಿಕೆಗಳಿಗೆ ಜಮೀನು ಸ್ವಾಧಿನ ಪಡಿಸಿಕೊಳ್ಳಲಾಗಿದ್ದು, ಜಮೀನುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಬೆನ್ನಲೇ ಖಾಸಗಿ ಹೆಲಿಕಾಪ್ಟರ್​ ಕಂಪನಿ ಉತ್ಪಾದನಾ ಟಕ ಸ್ಥಾಪನೆ ಮಾಡಲು ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಆಂಧ್ರಪ್ರದೇಶ, ತಮಿಳುನಾಡು ಗಡಿಯಲ್ಲಿರುವ ಕೋಲಾರ ಜಿಲ್ಲೆಯ ಮಾಲೂರು, ನರಸಾಪುರ, ವೇಮಗಲ್​ ಭಾಗದಲ್ಲಿ ಈಗಾಗಲೇ ನೂರಾರು ಪ್ರತಿಷ್ಠಿತ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಅದೇ ರೀತಿ ಮುಳಬಾಗಿಲು, ಕೆಜಿಎ್​, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ತಾಲೂಕು ವ್ಯಾಪ್ತಿಯಲ್ಲೂ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಜಮೀನುಗಳನ್ನು ಗುರುತಿಸುವ ಪ್ರಯತ್ನ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಭೂ ಸ್ವಾಧಿನ ಪ್ರಕ್ರಿಯೆ ಹಮ್ಮಿಕೊಳ್ಳಲು ಅಧಿಕಾರಿಗಳ ಪ್ರಯತ್ನದಲ್ಲಿದ್ದಾರೆ.

ಕೆಜಿಎಫ್ ​ ಸಮೀಪ ಇಂಟಿಗ್ರೇಟೆಡ್​ ಇಂಡಸ್ಟ್ರಿ ಟೌನ್​ಶಿಪ್​ ಮಾಡಲು ಸರ್ಕಾರದಿಂದ ಅನುಮೋದನೆ ದೊರೆತು ಕೈಗಾರಿಕೆ ಇಲಾಖೆಯ ಅಧಿಕಾರಿಗಳು, ಕೇಂದ್ರ, ರಾಜ್ಯ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಚಟುವಟಿಕೆಗಳು ಗರಿಗೆದರುತ್ತಿವೆ. ಜಿಲ್ಲೆಯು ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸಂಪರ್ಕ, ಬಂಗಾರಪೇಟೆ, ಕೆಜಿಎ್​, ಮಾಲೂರು ರೈಲ್ವೆ ನಿಲ್ದಾಣಗಳಿಂದ ರೈಲು ಸಂಪರ್ಕ ಹೊಂದಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 70 ಕಿಮೀ ದೂರದಲ್ಲಿದೆ. ಇದರಿಂದಲೇ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲೆಯೂ ಸೂಕ್ತ ವಾತಾವರಣ ಹೊಂದಿದೆ.

* ಉತ್ಪಾದನಾ ಘಟಕ ಪಡೆಯಲು ರಾಜ್ಯ ಯಶಸ್ಸು

ಘಟಕದಲ್ಲಿ ಉತ್ಪಾದನೆಯಾಗುವ ಏರ್​ಬಸ್​ನ ಎಚ್​ 125 ಹೆಲಿಕಾಪ್ಟರ್​ಗಳು ವಾಯುಸೇನೆ ಮತ್ತು ನೆರೆಯ ದೇಶಗಳಿಗೆ ಪೂರೈಕೆಯಾಗಲಿವೆ. ಇಂತಹ ಘಟಕವನ್ನು ತನ್ನದಾಗಿಸಿಕೊಳ್ಳಲು ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಗುಜರಾತ್​ ಸೇರಿ ಇತರ ರಾಜ್ಯಗಳು ಪೈಪೋಟಿ ನಡೆಸಿದ್ದವು. ಈ ಎಲ್ಲ ರಾಜ್ಯಗಳ ಪ್ರಯತ್ನವನ್ನು ಹಿಂದಿಕ್ಕುವ ಮೂಲಕ ಕರ್ನಾಟಕವು ಯೋಜನೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

* ಭಾರತದಲ್ಲಿ 4ನೇ ಟಕ

ಭಾರತೀಯ ವಾಯುಸೇನೆಗಾಗಿ ವೇಮಗಲ್​ನಲ್ಲಿ ಎಚ್​-125 ಹೆಲಿಕಾಪ್ಟರ್​ ಫೈನಲ್​ ಅಸೆಂಬ್ಲಿ ಲೈನ್​ ಅನ್ನು ಎರಡು ಕಂಪನಿಗಳು ಸ್ಥಾಪಿಸಲು ಮುಂದೆ ಬಂದಿವೆ. ಐಎಎಫ್​ ಅಲ್ಲದೆ ಭಾರತ ಮತ್ತು ನೆರೆಯ ದೇಶಗಳಿಗೆ ಚಾಪರ್​ಗಳನ್ನು ಇಲ್ಲಿಂದ ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ಫ್ರಾನ್ಸ್​, ಅಮೆರಿಕ ಮತ್ತು ಬ್ರೆಜಿಲ್​ ಸೇರಿ ಹಲವು ದೇಶಗಳಲ್ಲಿ ಘಟಕಗಳಿದ್ದು, ಭಾರತದಲ್ಲಿ ಇದು ನಾಲ್ಕನೇ ಘಟಕ ಆಗಲಿದೆ. ಆರಂಭದಲ್ಲಿ ವಾರ್ಷಿಕ 10 ಹೆಲಿಕಾಪ್ಟರ್​ ಉತ್ಪಾದಿಸುವ ಗುರಿ ಹೊಂದಿದ್ದು, ಮುಂದಿನ ವರ್ಷಗಳಲ್ಲಿ ಎಚ್​125 ಮಾದರಿಯ 500 ಲಘು ಹೆಲಿಕಾಪ್ಟರ್​ಗಳ ತಯಾರಿಗೆ ಬೇಡಿಕೆ ಬರಬಹುದು ಎಂದು ಏರ್​ಬಸ್​ ಅಂದಾಜಿಸಿದೆ.

* ಅಗತ್ಯ ಜಾಗ ಸ್ವಾಧಿನ

ಘಟಕ ಸ್ಥಾಪನೆಗಾಗಿ ಅಗತ್ಯ ಜಾಗ ಗುರುತಿಸಿದ್ದು, 7.4 ಲಕ್ಷ ಚದರ ಅಡಿಯನ್ನು ಈಗಾಗಲೇ ಸ್ವಾಧಿನಪಡಿಸಿಕೊಂಡಿದೆ. ಘಟಕದ ವಿಸ್ತರಣೆಗೆ ಬೇಕಾದ ಸ್ಥಳಾವಕಾಶದ ಜತೆಗೆ ಹೆಲಿಕಾಪ್ಟರ್​ಅನ್ನು ಕಳುಹಿಸಿಕೊಡುವ ಮುನ್ನ ಪರೀಕ್ಷಿಸಲು ಹೆಲಿಪ್ಯಾಡ್​ಗಳನ್ನು ಸಹ ನಿರ್ಮಿಸಿಕೊಳ್ಳಲಿದೆ. ರಾಜ್ಯದ ಏರೋಸ್ಪೇಸ್​ ಮತ್ತು ರಕ್ಷಣಾ ನೀತಿಯ ಭಾಗವಾಗಿ ಭೂಮಿ, ಬಂಡವಾಳ ಹೂಡಿಕೆ, ಸ್ಟಾಂಪ್​ ಡ್ಯೂಟಿ, ವಿದ್ಯುತ್​ ಶುಲ್ಕದಲ್ಲಿ ರಿಯಾಯಿತಿ ಮತ್ತು ವಾರ್ಷಿಕ ವಹಿವಾಟಿನ ಶೇ.1ರಷ್ಟು ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹಧನವನ್ನೂ 5 ವರ್ಷಗಳವರೆಗೆ ರಾಜ್ಯ ಸರ್ಕಾರ ನೀಡುವುದಾಗಿ ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್​ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಕೋಟ್​...

ಮಹತ್ವದ ಯೋಜನೆಗೆ ಕರ್ನಾಟಕ ಆಯ್ಕೆಯಾಗಿರುವುದು ರಾಜ್ಯದ ಕೈಗಾರಿಕಾ ಸಾಮರ್ಥ್ಯ ಹಾಗೂ ವಿಶ್ವಾಸಾರ್ಹ ನೀತಿಗಳ ಪ್ರತಿಫಲನವಾಗಿದೆ. ಇದರ ಪರಿಣಾಮ ಆಧುನಿಕ ಏರೋಸ್ಪೇಸ್​ ತಯಾರಿಕಾ ವಲಯದ ಮುಂಚೂಣಿ ನಾಯಕನಾಗಿ ಕರ್ನಾಟಕದ ಪಾರಮ್ಯ ಮುಂದುವರಿಸಲಿದೆ.

* ಎಂ.ಬಿ.ಪಾಟೀಲ್​, ಕೈಗಾರಿಕೆಗಳ ಸಚಿವ

ಕೋಟ್​...

ಕೋಲಾರ ಹಿಂದುಳಿದಿರುವ ಜಿಲ್ಲೆಯಾಗಿದೆ. ಇಲ್ಲಿ ಕೈಗಾರಿಕೆಗಳು ಸ್ಥಾಪನೆಯಾದಷ್ಟು ನಿರುದ್ಯೋಗಿ ಯುವಕರಿಗೆ ಕೆಲಸ ಸಿಗುತ್ತದೆ. ಆದರೆ ಕೆಲಸದಲ್ಲಿ ಸ್ಥಳಿಯರಿಗೆ ಹೆಚ್ಚು ಆದ್ಯತೆ ದೊರೆಯುವಂತೆ ಮಾಡಲು ಸರ್ಕಾರಗಳು ಮುಂದಾಗಬೇಕು.

* ಎಂ.ಕೆ.ರಾವೇಂದ್ರ, ಕರವೇ ಜಿಲ್ಲಾಧ್ಯಕ್ಷ, ಕೋಲಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net