

ಚಿಕ್ಕಮಗಳೂರು: ಬಸ್ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಖಾಸಗಿ ಬಸ್ ನುಗ್ಗಿದ ಪರಿಣಾಮ ಓರ್ವ ಬಾಲಕಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ದುಗ್ಲಾಪುರ ಗೇಟ್ ಬಳಿ ಸಂಭವಿಸಿದೆ.
ಪ್ರತಿದಿನ ಬಸ್ಸಿಗೆಂದು ಕಾಯುವ ಶಾಲಾ ಮಕ್ಕಳ ಗುಂಪೊಂದು ಇಂದು ಕೂಡ ಬಸ್ಗಾಗಿ ಕಾಯುತ್ತಿತ್ತು. ಈ ವೇಳೆ ವೇಗವಾಗಿ ಬಂದ ಖಾಸಗಿ ಬಸ್, ಮಕ್ಕಳ ಮೇಲೆ ನುಗ್ಗಿದ ಪರಿಣಾಮ ತುಳಸಿ ಎಂಬ 15 ವರ್ಷದ ಬಾಲಕಿ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಈ ವೇಳೆ ನಿವೇದಿತಾ (14) ಗಂಭೀರವಾಗಿ ಗಾಯಗೊಂಡಿದ್ದು, ಉಳಿದವರು ಅದೃಷ್ಟವಶಾತ್ ಪಾರಾಗಿದ್ದಾರೆ.
ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಪ್ರತಿಯೊಂದು ಖಾಸಗಿ ಬಸ್ ಚಾಲಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ರಸ್ತೆಯಲ್ಲಿ ಸಾಗುತ್ತಿರುವ ಬಸ್ಗಳನ್ನು ಅಡ್ಡಗಟ್ಟಿ ನಿಧಾನವಾಗಿ ಚಲಿಸುವಂತೆ ಹೇಳಿದ್ದಾರೆ.