ದರ್ಶನ್​ ಖೈದಿ ಸಂಖ್ಯೆ 6106 ಫ್ಯಾನ್ಸ್ ಪಾಲಿಗೆ ಇದು ಲಕ್ಕಿ ನಂಬರ್​! ವಾಹನ ನೋಂದಣಿಗೆ ಈ ನಂಬರ್​ನಲ್ಲೇ ಹೆಚ್ಚಿದೆ ಬೇಡಿಕೆ

darshan
Published on

ಬೆಂಗಳೂರು:  ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿ ಆಗಿರುವ ಅವರಿಗೆ 6106 ಖೈದಿ ನಂಬರ್​ ಕೊಡಲಾಗಿದೆ.   ಫ್ಯಾನ್ಸ್ ಪಾಲಿಗೆ ಇದು ಲಕ್ಕಿ ನಂಬರ್​ ಎಂಬ ಭಾವನೆ ಕೆಲವರಿಗೆ ಮೂಡಿದೆ.

ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್​ ಕಳಿಸಿದ್ದ ಎಂಬ ಕಾರಣಕ್ಕೆ ರೇಣುಕಾ ಸ್ವಾಮಿ ಎಂಬಾತನನ್ನು ಕೊಲೆ ಮಾಡಿದ ಆರೋಪದಲ್ಲಿ ದರ್ಶನ್​ ಜೈಲು ಸೇರಿದ್ದಾರೆ. ಅವರಿಗೆ 6106 ಖೈದಿ ನಂಬರ್​ ನೀಡಲಾಗಿದೆ. ಈ ನಂಬರ್​ ಮೇಲೆ ಕೆಲವು ಅಭಿಮಾನಿಗಳಿಗೆ ಆಕರ್ಷಣೆ ಹೆಚ್ಚಿದೆ. ಇದೇ ನಂಬರ್​ನಲ್ಲಿ ಹೊಸ ವಾಹನಗಳ ನೋಂದಣಿ ಮಾಡಿಸಿಕೊಳ್ಳಲು ಕೆಲವು ಫ್ಯಾನ್ಸ್​ ಮುಂದಾಗಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರದಲ್ಲಿ ಇರುವ ದರ್ಶನ್​ ಅವರನ್ನು ನೋಡಲೇಬೇಕು ಎಂದು ಕೆಲವು ಅಭಿಮಾನಿಗಳು ಹಠ ಹಿಡಿದಿದ್ದಾರೆ. ದೂರದ ಊರುಗಳಿಂದ ಬಂದಿರುವ ಫ್ಯಾನ್ಸ್​ ಈಗಾಗಲೇ ಜೈಲಿನ ಮುಂದೆ ನಿಂತು ಕಾಯುತ್ತಿದ್ದಾರೆ. ‘ಅವರನ್ನು ನೋಡಿಕೊಂಡೇ ನಾವು ಊರಿಗೆ ಹೋಗೋದು’ ಎಂದು ಕೆಲವರು ಕಣ್ಣೀರು ಹಾಕುತ್ತಿದ್ದಾರೆ. ಸದ್ಯಕ್ಕೆ ದರ್ಶನ್​, ಪವಿತ್ರಾ ಹಾಗೂ ಅವರ ಸಹಚರರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net