ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ

23sdp1a
Published on

ಸಿದ್ದಾಪುರ: ಸಾರ್ವಜನಿಕರ ಆರೋಗ್ಯದಾತರಾಗಿರುವ ಪೌರಕಾರ್ವಿುಕರ ಬದುಕಲ್ಲೂ ಬೆಳಕು ಚೆಲ್ಲುವ ಕೆಲಸಕ್ಕೆ ಸರ್ಕಾರದ ಮೇಲೆ ಒತ್ತಡ ತಂದು ಸುಸಜ್ಜಿತ ಸೂರು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಸ್ಥಳೀಯ ಪಪಂ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದದ ಪೌರಕಾರ್ವಿುಕರ ದಿನಾಚರಣೆ ಉದ್ಘಾಟಿಸಿ, ಪೌರ ಕಾರ್ವಿುಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ತಮ್ಮ ಮನೆಯ ಆವರಣವನ್ನು ಸ್ವಚ್ಛವಾಗಿಟ್ಟಂತೆ ಸಾರ್ವಜನಿಕ ಪ್ರದೇಶದಲ್ಲೂ ಕೂಡ ಸ್ವಚ್ಛತೆಗೆ ಆದ್ಯತೆ ನೀಡಬೇಕು. ದೇಶದ ಬೆನ್ನೆಲುಬು ರೈತನಂತೆ ಸಾರ್ವಜನಿಕರ ಆರೋಗ್ಯದಾತರಾದ ಪೌರಕಾರ್ವಿುಕರಿಗೂ ಗೌರವ ನೀಡಬೇಕು. ಪೌರಕಾರ್ವಿುಕರು ಮಾಡುವ ಕಾಯಕಕ್ಕಿಂತ ಶ್ರೇಷ್ಠ ಕೆಲಸ ಇನ್ನೊಂದಿಲ್ಲ. ಇಡೀ ಸಮಾಜ ಪೌರಕಾರ್ವಿುಕರಿಗೆ ನಗುಮೋಗದಿಂದ ಸ್ಪಂದಿಸಬೇಕು. ಪೌರಕಾರ್ವಿುಕರ ಮಕ್ಕಳು ಸಮಾಜದಲ್ಲಿ ಮೇಲಸ್ತರಕ್ಕೆ ಬರಬೇಕು. ಸಿದ್ದಾಪುರ ಪಪಂ ರಸ್ತೆಗಳಿಗೆ 6.50 ಕೋಟಿ ರೂ.ಅನುದಾನ ನೀಡಲಾಗಿದೆ. ಸೊರಬಾ ರಸ್ತೆಗೆ 2.50 ಕೋಟಿ ರೂ. ಮಂಜುರಾಗಿದ್ದು, ತಕ್ಷಣದಲ್ಲಿ ಕಾರ್ಯಾದೇಶ ದೊರಕಲಿದೆ ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಪಪಂ ಸದಸ್ಯ ಕೆ.ಜಿ. ನಾಯ್ಕ ಹಣಜಿಬೈಲ್, ಸ್ವಚ್ಛತಾ ರಾಯಭಾರಿ ಡಾ. ಕೆ.ಶ್ರೀಧರ ವೈದ್ಯ ಮಾತನಾಡಿದರು.

ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅಧ್ಯಕ್ಷತ ೆವಹಿಸಿದ್ದರು. ಪೌರಕಾರ್ವಿುಕರ ದಿನದ ಅಂಗವಾಗಿ ಪಪಂನಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ವಿುಕರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ್ ಪಪಂ ಸದಸ್ಯರು ಉಪಸ್ಥಿತರಿದ್ದರು. ಶ್ರೀರಾಮ ನಾಯ್ಕ ಸ್ವಾಗತಿಸಿದರು. ಪಪಂ ಮುಖ್ಯಾಧಿಕಾರಿ ಜಗದೀಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸುಧರಾಣಿ ನಾಯ್ಕ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net