

Principal and Teacher : ಜಗತ್ತಿನ ಯಾವುದೇ ಮೂಲೆಗೆ ಹೋಗಿ ಶಾಲೆಯನ್ನು ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಮಕ್ಕಳ ಸುಂದರ ಜೀವನಕ್ಕಾಗಿ ಉತ್ತಮ ಅಡಿಪಾಯ ಹಾಕುವುದು ಶಾಲೆಯಲ್ಲೇ. ಅದಕ್ಕಾಗಿಯೇ ಅನೇಕ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಶಾಲೆಗೆ ಕಳುಹಿಸಲು ಶ್ರಮಿಸುತ್ತಾರೆ. ಹಣ ಖರ್ಚು ಮಾಡಲು ಕೂಡ ಹಿಂಜರಿಯುವುದಿಲ್ಲ. ಕೆಲವು ಶಿಕ್ಷಕರು ಮಕ್ಕಳಿಗೆ ಪಾಠದ ಜೊತೆಗೆ ಜೀವನದ ಬಗ್ಗೆಯೂ ಕಲಿಸುತ್ತಾರೆ. ಇತ್ತೀಚೆಗೆ, ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಣ ಸಿಗುತ್ತಿದೆ ಎಂಬ ನಂಬಿಕೆ ಇದೆ.
ಆದರೆ, ಕೆಲವು ಶಿಕ್ಷಕರು ತಮ್ಮ ವೃತ್ತಿಗೆ ಅವಮಾನವಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕೆಲವರು ಶಾಲೆಗೆ ಕುಡಿದು ಬಂದರೆ, ಇನ್ನು ಕೆಲವರು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದಿದ್ದಾರೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವಂತಹ ಅನೇಕ ಪ್ರಕರಣಗಳು ಕೂಡ ಈ ಹಿಂದೆ ವರದಿಯಾಗಿವೆ. ಕೆಲವೊಮ್ಮೆ ಶಿಕ್ಷಕರ ನಡುವಿನ ಅನೈತಿಕ ಸಂಬಂಧವೂ ಕೂಡ ಬಟಾಬಯಲಾಗಿ ಶಾಲೆಯ ಮಾನ ಹರಾಜಾಗಿರುವುದು ಉಂಟು.
ಇದೆಲ್ಲದವರ ನಡುವೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಶಾಲಾ ಆಡಳಿತ ಕಚೇರಿಯಲ್ಲೇ ಶಿಕ್ಷಕಿಯೊಂದಿಗೆ ಪ್ರಾಂಶುಪಾಲರು ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋ ಹೊರಬಿದ್ದಿದೆ. ವಿಡಿಯೋದಲ್ಲಿ ಶಿಕ್ಷಕರು ಪರಸ್ಪರ ಮುತ್ತಿಡುವುದು, ಅಪ್ಪಿಕೊಳ್ಳುವುದು ಮತ್ತು ತುಂಬಾ ಅಸಭ್ಯವಾಗಿ ವರ್ತಿಸುವುದನ್ನು ತೋರಿಸಲಾಗಿದೆ. ತಾವು ಶಾಲೆಯಲ್ಲಿದ್ದೇವೆ ಎಂಬುದನ್ನು ಮರೆತು ಅಶ್ಲೀಲವಾಗಿ ವರ್ತಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ ರಾಜಸ್ಥಾನದ ಚಿತ್ತೋರ್‌ಗಢದ ಶಾಲೆಗೆ ಸಂಬಂಧಿಸಿದ್ದಾಗಿದೆ. ವಿಡಿಯೋ ವೈರಲ್ ಆದ ಬಳಿಕ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಶಿಕ್ಷಣ ಇಲಾಖೆ ಇಬ್ಬರನ್ನೂ ಅಮಾನತುಗೊಳಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಬಂದು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. (ಏಜೆನ್ಸೀಸ್)