ಆಪರೇಷನ್ ಸಿಂಧೂರಕ್ಕೆ ಪ್ರಧಾನಿ ಮೇಲ್ವಿಚಾರಣೆ

modi
Published on

ನವದೆಹಲಿ: ಭಾರತೀಯ ಸೇನಾಪಡೆಗಳು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಕ್ಯಾಂಪ್​ಗಳು, ವಾಯುನೆಲೆಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದವು. ಈ ದಾಳಿಗಳ ಮೇಲ್ವಿಚಾರಣೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಖುದ್ದಾಗಿ ವಹಿಸಿದ್ದರು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಪಹಲ್ಗಾಮ್ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿದಾಗ ಮೋದಿ ತಮ್ಮ ಪ್ರವಾಸ ಮೊಟಕುಗೊಳಿಸಿ ವಾಪ ಸಾಗಿದ್ದರು. ಜತೆಗೆ ವಾಯುದಾಳಿಯ ವೇಳೆ ರಾತ್ರಿಯಿಡೀ ಕ್ಷಣಕ್ಷಣದ ಮಾಹಿತಿ ಪಡೆಯು ತ್ತಿದ್ದರು. ಮೋದಿ ಸೇನಾಪಡೆಗಳ ಮುಖ್ಯಸ್ಥರಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿದ್ದರು. ಇದರಿಂದಾಗಿ ಸೇನಾಪಡೆಗಳು ಸೂಕ್ತ ನಿರ್ಧಾರ ತೆಗೆದುಕೊಂಡು ದಾಳಿ ನಡೆಸಿದ್ದವು. ಇದು ಹಿಂದೆಂದೂ ಸಂಭವಿಸಿರಲಿಲ್ಲ. ಮೋದಿ ಅವರು ಅಗಾಧ ಸ್ಪಷ್ಟತೆ ಹೊಂದಿದ್ದಾರೆ. ಅವರು ತ್ವರಿತವಾಗಿ ನಿರ್ಣಯಗಳನ್ನು ತಗೆದುಕೊಳ್ಳುತ್ತಾರೆ. ನಾಗರಿಕರಿಗೆ ಹಾನಿಯುಂಟಾಗದಂತೆ ನಾವು ಭಯೋತ್ಪಾದಕರ ಶಿಬಿರಗಳು ಮತ್ತು ಭಯೋತ್ಪಾದಕರನ್ನು ನಾಶಪಡಿಸಬೇಕು ಎಂಬ ಸ್ಪಷ್ಟ ನಿಲುವು ಇತ್ತು. ಅದನ್ನು ಅವರು ಕೊನೆಯವರೆಗೂ ಪಾಲಿಸಿದರು ಮತ್ತು ಸೇನಾ ಪಡೆಗಳಿಗೂ ನಾಗರಿಕರಿಗೆ ಹಾನಿಯುಂಟಾಗದಂತೆ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದರು. ಪಾಕಿಸ್ತಾನ ಅಣ್ವಸ್ತ್ರ ದಾಳಿಯ ಬೆದರಿಕೆ ಒಡ್ಡಿತ್ತು. ಆದರೆ ಮೋದಿ ಯಾವುದೇ ರೀತಿಯ ಬೆದರಿಕೆಗೆ ಒಳಗಾಗಲಿಲ್ಲ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net