ಶುಕ್ರವಾರ ರೈತರನ್ನುದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ; 6 ರಾಜ್ಯದ ರೈತರೊಂದಿಗೆ ಸಭೆ

Narendra Modi
Narendra Modi
Published on

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟ ದಿನೇದಿನೆ ಕಾವು ಹೆಚ್ಚಿಸಿಕೊಳ್ಳುತ್ತಲೇ ಇದೆ. ಕೇಂದ್ರದೊಂದಿಗಿನ ಮಾತುಕಥೆಯೂ ಹಲವು ಬಾರಿ ವಿಫಲವಾಗಿದೆ. ಇದೀಗ ರೈತರೊಂದಿಗೆ ಮಾತನಾಡಲು ಪ್ರಧಾನಿ ನರೇಂದ್ರ ಮೋದಿಯವರು ಮುಂದೆ ಬಂದಿದ್ದಾರೆ. ಕ್ರಿಸ್​ಮಸ್​ ದಿನವಾದ ಡಿಸೆಂಬರ್​ 25ರಂದು ಪ್ರಧಾನಿಯವರು ದೇಶದ ರೈತರೊಂದಿಗೆ ಸಭೆ ನಡೆಸಲಿದ್ದು, 9 ಕೋಟಿ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಶುಕ್ರವಾರದಂದು ಮೋದಿಯವರು ಆರು ರಾಜ್ಯಗಳ ರೈತರೊಂದಿಗೆ ಸಭೆ ನಡೆಸಲಿದ್ದಾರೆ. ದೇಶದಲ್ಲಿ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅನುಭವವನ್ನು ಈ ರೈತರು ಪ್ರಧಾನಿಯೊಂದಿಗೆ ಹಂಚಿಕೊಳ್ಳಲಿದ್ದಾರೆ. ನೂತನ ಕೃಷಿ ಕಾಯ್ದೆಗಳ ಬಗ್ಗೆಯೂ ಮೋದಿಯವರು ಮಾತನಾಡಲಿದ್ದಾರೆ. ಅದರ ಜತೆ ಪಿಎಂ ಕಿಸಾನ್​ ಯೋಜನೆಯ 18,000 ಕೋಟಿ ರೂಪಾಯಿ ಆರ್ಥಿಕ ಸಹಾಯವನ್ನೂ ಬಿಡುಗಡೆ ಮಾಡಲಿದ್ದಾರೆ.

ದೇಶದ ರೈತರಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್​ ಅವರು ಪತ್ರವನ್ನು ಬರೆದಿದ್ದು, ಆ ಪತ್ರವನ್ನೂ ಸಭೆಯಲ್ಲಿ ಬಿತ್ತರಿಸಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net