

ಅಹಮದಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಏರ್ಫೋರ್ಸ್-1 ವಿಮಾನದಿಂದ ಕೆಳಗಿಳಿದರು.
ಟ್ರಂಪ್ರನ್ನು ಮೋದಿಯವರು ಸ್ವಾಗತಿಸಿದರು. ಇಬ್ಬರೂ ಪರಸ್ಪರ ತಬ್ಬಿಕೊಂಡು ಕುಶಲೋಪರಿ ವಿಚಾರಿಸಿದರು. ಹಾಗೇ ಮೆಲಾನಿಯಾ ಅವರಿಗೂ ಶೇಕ್ಹ್ಯಾಂಡ್ ಮಾಡುವ ಮೂಲಕ ನರೇಂದ್ರ ಮೋದಿ ಸ್ವಾಗತ ಕೋರಿದರು.
ಏರ್ಫೋರ್ಸ್ -1 ವಿಮಾನ ಲ್ಯಾಂಡ್ ಆದಬಳಿಕ ಮೊದಲು ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಮತ್ತು ಅಳಿಯ ಜೇರೆಡ್ ಕುಶ್ನರ್ ಮಾತ್ರ ಕೆಳಕ್ಕೆ ಇಳಿದಿದ್ದರು. ಅದಾದ ಸ್ವಲ್ಪ ಸಮಯದ ಬಳಿಕ ಟ್ರಂಪ್ ಮತ್ತು ಅವರ ಪತ್ನಿ ಕೆಳಗೆ ಬಂದಿದ್ದಾರೆ.
ಇವಾಂಕಾ ಟ್ರಂಪ್ ಹಾಗೂ ಅವರ ಪತಿಯೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಬ್ಬರಿಗೂ ಭಾರತಕ್ಕೆ ಸ್ವಾಗತ ಕೋರಿದರು.
ಟ್ರಂಪ್ ಆಗಮನದ ವೇಳೆ ಏರ್ಪೋರ್ಟ್ನಲ್ಲಿ ವಿವಿಧ ನೃತ್ಯ ಕಲಾತಂಡಗಳು ಉಪಸ್ಥಿತರಿದ್ದು ನೃತ್ಯ ಪ್ರದರ್ಶನ ನೀಡಿದರು. ಈಗ 22 ಕಿಮೀ ರೋಡ್ ಶೋ ಆರಂಭವಾಗಿದ್ದು, ನಾಯಕರಿಬ್ಬರೂ ಸಬರಮತಿ ಆಶ್ರಮದತ್ತ ಹೊರಟಿದ್ದಾರೆ. (ಏಜೆನ್ಸೀಸ್)