

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಎಚ್ಎಎಲ್(HAL) ಹೆಲಿಕಾಪ್ಟರ್ ಘಟಕವನ್ನು ಉದ್ಘಾಟನೆ ಮಾಡಿದ್ದಾರೆ. ಬಳಿಕ ಎಚ್ಎಲ್ ಘಟಕ ನಿರ್ಮಿಸಿರುವ ಹೆಲಿಕಾಪ್ಟರ್ನ್ನು ವೀಕ್ಷಿಸಿದರು. ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು. 2016ರಲ್ಲಿ ಪ್ರಧಾನಿ ಮೋದಿ ಎಚ್ಎಎಲ್ ಹೆಲಿಕಾಪ್ಟರ್ ನಿರ್ಮಾಣ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.
ಏಷ್ಯಾದ ಅತೀ ದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕ ಇದಾಗಿದೆ. ಲಘು ಉಪಯೋಗಿ ಹೆಲಿಕಾಪ್ಟರ್ಗಳ ತಯಾರಿಕೆಗಾಗಿ ಇಲ್ಲಿ ಆಗಲಿದೆ. 615 ಎಕರೆ ಪ್ರದೇಶದಲ್ಲಿರುವ ಈ ಘಟಕ ಅತ್ಯಾಧುನಿಕ ಕೈಗಾರಿಕಾ 4.0 ಸಾಧನಗಳು ಹಾಗೂ ತಂತ್ರಗಳೊಂದಿಗೆ ಸುಸಜ್ಜಿತ ವ್ಯವಸ್ಥೆ ಹೊಂದಿದೆ. ಈ ಘಟಕದಲ್ಲ ವರ್ಷಕ್ಕೆ 30 ಹೆಲಿಕಾಪ್ಟರ್ ನಿರ್ಮಾಣ ಮಾಡುವ ಗುರಿ ಹೊಂದಿದೆ.