ಪ್ರಾಥಮಿಕ ಸಹಕ್ರಾ ಕೃಷಿ, ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗೆ ಲಾಭ

21SPT03
ಸೋಮವಾರಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷ ಬಿ.ಬಿ.ಸತೀಶ್ ಮಾತನಾಡಿದರು. ಜನಾರ್ದನ್ ಪ್ರಭು, ಪುರುಷೋತ್ತಮ್, ದಾಮೋದರ್ ಇದ್ದರು.
Published on

ಸೋಮವಾರಪೇಟೆ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ.ಬಿ.ಸತೀಶ್ ಅವರ ಅಧ್ಯಕ್ಷತೆಯಲ್ಲಿ ಕೊಡವ ಸಮಾಜ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಬ್ಯಾಂಕ್ 2024-25ನೇ ಸಾಲಿನಲ್ಲಿ 18,40,640 ರೂ., ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.5 ಲಾಭಾಂಶ ಘೋಷಣೆ ಮಾಡಲಾಗಿದೆ. ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಲಾಭಾಂಶವನ್ನು ಕಟ್ಟಡ ನಿಧಿಗೆ ವರ್ಗಾಯಿಸುವಂತೆ ಸಭೆ ತೀರ್ಮಾನಿಸಿತು.

ಅಧ್ಯಕ್ಷ ಬಿ.ಬಿ.ಸತೀಶ್ ಮಾತನಾಡಿ, ವರ್ಷಾಂತ್ಯಕ್ಕೆ 11,980ರ ಸದಸ್ಯರ ಪೈಕಿ 2,233 ಪೂರ್ಣ ಪ್ರಮಾಣದ ಷೇರುದಾರರಿದ್ದು, ಪ್ರಸಕ್ತ ಸಾಲಿನಲ್ಲಿ 263 ನೂತನ ಸದಸ್ಯರು ಬ್ಯಾಂಕ್ ಸದಸ್ಯತ್ವ ಪಡೆದಿದ್ದಾರೆ. ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜನಾರ್ದನ ಪ್ರಭು, ನಿರ್ದೇಶಕರಾದ ಟಿ.ಆರ್.ಪುರುಷೋತ್ತಮ್, ಎಂ.ಟಿ.ದಾಮೋದರ್, ಡಿ.ಭಗವಾನ್, ಎಚ್.ಬಿ.ಶಿವಕುಮಾರ್, ಪಿ.ಸಿ.ಬೇಲಯ್ಯ, ಬಿ.ಎನ್.ಮಂಜುನಾಥ್, ಕೆ.ಬಿ.ಕವಿತಾ, ಎಸ್.ಪಿ.ಪೊನ್ನಪ್ಪ, ಬಿ.ಪಿ.ಸುಮಲತಾ, ಬಿ.ಎಂ.ಸುರೇಶ್, ಬಿ.ಬಿ.ಆದರ್ಶ್, ಕೆ.ಜಿ. ಕುಮಾರಸ್ವಾಮಿ, ಜಿ.ಆರ್.ತಮ್ಮಯ್ಯ ಹಾಗೂ ಪ್ರಭಾರ ವ್ಯವಸ್ಥಾಪಕ ಬಿ.ವಿ.ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net