ಸಖತ್​ ಐಡಿಯಾ ಗುರು| ಸಮಯ, ಖರ್ಚು ಉಳಿಸುವ ಐಡಿಯಾಗೆ ಬೆಲೆ

Ramesh Aravind
Published on

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.

ಸಮಯ, ಖರ್ಚು ಉಳಿಸುವ ಐಡಿಯಾಗೆ ಬೆಲೆ

ಸಿನಿಮಾದಲ್ಲಿ ನಟನೆ, ನಿರ್ವಣ, ನಿರ್ದೇಶನ ಮಾತ್ರವಲ್ಲದೆ, ಸಾಕಷ್ಟು ಹೊಸ ಕೆಲಸಗಳು ಸೃಷ್ಟಿಯಾಗಿವೆ. ನಟನೆ, ತಂತ್ರಜ್ಞಾನದ ಬಗ್ಗೆ ತರಬೇತಿ ಕೊಡಬಹುದು. ಒಳ್ಳೆಯ ಧ್ವನಿ ಇದ್ದವರು, ಬೇರೆ ಭಾಷೆ ಗೊತ್ತಿದ್ದವರು ಡಬ್ ಮಾಡಬಹುದು. ಬರವಣಿಗೆ ಚೆನ್ನಾಗಿದ್ದವರು ಸಬ್​ಟೈಟಲ್ಸ್ ಬರೆಯಬಹುದು. ಸೆನ್ಸಾರ್ ಸ್ಕ್ರಿಪ್ಟ್ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬಹುದು.ಇತ್ತೀಚಿನ ದಿನಗಳಲ್ಲಿ ವೆಬ್​ಸೀರಿಸ್, ಅಮೆಜಾನ್, ನೆಟ್​ಫ್ಲಿಕ್ಸ್ ಬಂದ ಮೇಲೆ ಅವರು ಗುಣಮಟ್ಟದ ಸ್ಕ್ರಿಪ್ಟ್​ಗಳನ್ನು ನಿರೀಕ್ಷಿಸುತ್ತಾರೆ. ಇಂಟರ್​ನ್ಯಾಷನಲ್ ಗುಣಮಟ್ಟದ ಸ್ಕ್ರಿಪ್ಟ್ ಸಿದ್ಧಪಡಿಸುವುದು, ಕರೆಕ್ಷನ್ ಮಾಡುವುದು ಕೂಡ ಒಂದು ಉದ್ಯೋಗವೇ. ಸಿನಿಮಾ ಬಗ್ಗೆ, ಚಿತ್ರರಂಗದ, ನಟ-ನಟಿಯರ ವೈಯಕ್ತಿಕ ಕಾರ್ಯಕ್ರಮಗಳ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು. ಇನ್ನು ಸಿನಿಮಾದಲ್ಲಿ ಎಲ್ಲಕ್ಕಿಂತ ಎರಡು ವಿಷಯ ಬಹಳ ಮುಖ್ಯ. ಒಂದು ಸಮಯ, ಮತ್ತೊಂದು ಖರ್ಚು. ಹಾಗಾಗಿ ಪ್ರೊಡಕ್ಷನ್​ನ ಸಮಯ ಉಳಿಸುವಂಥ ಮತ್ತು ಖರ್ಚು ಕಡಿಮೆ ಮಾಡುವಂಥ ಐಡಿಯಾಗೆ ಬೆಲೆ ಇರುತ್ತದೆ. ಅಂಥ ಯುವಕ ಯುವತಿಯರಿಗೆ ಸಿನಿಮಾರಂಗದಲ್ಲಿ ಖಂಡಿತ ಅವಕಾಶ ಇದ್ದೇ ಇದೆ.

| ರಮೇಶ್ ಅರವಿಂದ್ ನಟ-ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net