

ಬೆಂಗಳೂರು: ಇಂದು ಮಾರುಕಟ್ಟೆಯಲ್ಲಿ ಸೊಪ್ಪು- ತರಕಾರಿ ಬೆಲೆ ಏರಿದ್ದು ಜನರು ದಿನ ಬಳಕೆಗೆ ಬೇಕಾದದ್ದನ್ನು ಖರೀದಿಸಲು ಕಷ್ಟಪಡುತ್ತಿದ್ದಾರೆ. ತರಕಾರಿ ಬೆಲೆ ಏರಿಕೆಯಿಂದಾಗಿ ಜನರ ಜೇಬು ಸುಡುತ್ತಿದ್ದು ಕಂಗಾಲಾಗಿದ್ದಾರೆ.
ಮಳೆಯಿಂದಾಗಿ ಬೆಂಗಳೂರಿಗೆ ಸರಿಯಾಗಿ ತರಕಾರಿ ಪೂರೈಕೆ ಆಗದ ಹಿನ್ನೆಲೆಯಲ್ಲಿ ಈ ಸಮಸ್ಯೆ ತಲೆದೋರಿದೆ ಎನ್ನಲಾಗಿದೆ. ಇದರಿಂದಾಗಿ ಉತ್ತಮ ಗುಣಮಟ್ಟದ ತರಕಾರಿಯ ಅಲಭ್ಯತೆ ಉಂಟಾಗಿದ್ದು ಅವುಗಳ ಬೆಲೆಯೂ ಮಾರುಕಟ್ಟೆಯಲ್ಲಿ ಏರಿದೆ.