

ನವದೆಹಲಿ: ಕಾಲಚಕ್ರದಲ್ಲಿ 2020ರ ಕ್ಯಾಲೆಂಡರ್ ವರ್ಷ ದಾಟಿ ಜಗತ್ತು 2021ರ ಕ್ಯಾಲೆಂಡರ್ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಶುಭ ಕೋರಿದ್ದು ಹೀಗೆ..
ರಾಷ್ಟ್ರಪತಿ ರಾಮನಾಥ ಕೋವಿಂದ ಅವರು, ಪ್ರತಿಯೊಬ್ಬರಿಗೂ ಹೊಸ ವರ್ಷದ ಶುಭಾಶಯಗಳು, ಹೊಸ ವರ್ಷ ಹೊಸ ಶುರುವಾತಿಗೆ ಹೊಸ ಅವಕಅಶಗಳನ್ನು ಒದಗಿಸಲಿ ಮತ್ತು ವೈಯಕ್ತಿಕ ಮತ್ತು ಸಾಮೂಹಿಕ ಅಭಿವೃದ್ಧಿಗೆ ಅನುಕೂಲವಾಗಲಿ. ಕೋವಿಡ್ 19 ತಂದೊಡ್ಡಿದ ಸವಾಲುಗಳು ಒಟ್ಟಾಗಿ ಮುಂದೆ ಸಾಗುವ ನಮ್ಮ ಸಂಕಲ್ಪಶಕ್ತಿಯನ್ನು ಹೆಚ್ಚಿಸಿದೆ ಎಂದು ಸರಣಿ ಟ್ವೀಟಿನ ಮೊದಲ ಸಂದೇಶದಲ್ಲಿ ಮೂಲಕ ದೇಶವಾಸಿಗಳಿಗೆ ಶುಭಹಾರೈಸಿದ್ದಾರೆ. ಇನ್ನೊಂದರಲ್ಲಿ ಸಮೂಹಕ್ಕಾಗಿ, ಉತ್ತಮ ಸಮಾಜಕ್ಕಾಗಿ ಮಾಡುತ್ತಿರುವ ಕೆಲಸವನ್ನು ಎಲ್ಲರೂ ಮುಂದುವರಿಸೋಣ. ದೇಶದ ಪ್ರಗತಿ ಸಾಧನೆ ನಮ್ಮೆಲ್ಲರ ಸಾಮಾನ್ಯ ಗುರಿಯಾಗಿದ್ದು, ಅದನ್ನು ಈಡೇರಿಸಲು ಎಲ್ಲರಿಗೂ ಆರೋಗ್ಯ, ಸುರಕ್ಷತೆ ಇರುವಂತಾಗಲಿ ಎಂದಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಹೊಸ ಕ್ಯಾಲೆಂಡರ್ ವರ್ಷ ಶುರುವಾತಿನಲ್ಲಿ ದೇಶವಾಸಿಗಳಿಗೆ ಶುಭ ಕೋರಿದ್ದು ಹೀಗೆ - ವಿಷಿಂಗ್ ಯೂ ಎ ಹ್ಯಾಪಿ 2021! ಈ ವರ್ಷ ಉತ್ತಮ ಆರೋಗ್ಯ, ಸಂತೋಷ ಮತ್ತು ಸಕಲ ಐಶ್ವರ್ಯಗಳನ್ನು ಈ ವರ್ಷ ತರಲಿ. ಭರವಸೆ ಮತ್ತು ಸ್ವಾಸ್ಥ್ಯದ ಮನೋಭಾವ ಮೇಲುಗೈ ಸಾಧಿಸಲಿ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..