More

    Web Exclusive|ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಕಡಿತ

    | ಮೃತ್ಯುಂಜಯ ಕಪಗಲ್, ಬೆಂಗಳೂರು

    ಕರೊನಾಘಾತದಿಂದ ರಾಜ್ಯದ ಖಜಾನೆ ಇನ್ನೂ ತುಂಬಿಕೊಂಡಿಲ್ಲ. ಇದರಿಂದಾಗಿ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಕಡಿತದ ಬರೆ ಬಿದ್ದಿದೆ. ಉದ್ಯಮ-ವಹಿವಾಟು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದು, ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ನಿರೀಕ್ಷಿತ ಗುರಿ ತಲುಪಲು ಇನ್ನಷ್ಟು ಕಾಲಾವಕಾಶ ಹಿಡಿಯಲಿದೆ.

    ಒಂದೆಡೆ ಆರ್ಥಿಕ ಮುಗ್ಗಟ್ಟು, ಮತ್ತೊಂದೆಡೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲಿನಲ್ಲಿ ಕತ್ತರಿ ಪ್ರಯೋಗವು ಜನ ಕಲ್ಯಾಣ ಕಾರ್ಯಕ್ರಮಗಳ ಮೇಲೆ ವ್ಯತಿರಿಕ್ತ ಪರಿಣಾಮಬೀರಿದೆ. ಆದರೆ ಜನ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಹೊಣೆ ಹೊತ್ತ ಪ್ರಮುಖ ಇಲಾಖೆಗಳಿಗೆ ಕಾಲಮಿತಿಯ ಅನಿವಾರ್ಯತೆಯಿದೆ. ಹೀಗಾಗಿ ಆರ್ಥಿಕ ಕುಸಿತದ ಮಧ್ಯೆ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಒತ್ತಡಕ್ಕೆ ಸಿಲುಕಿವೆ.

    ತಾತ್ಕಾಲಿಕ ಪರಿಹಾರೋಪಾಯ

    ಸಂಕಷ್ಟ ನಿವಾರಣೆಗೆ ತಾತ್ಕಾಲಿಕ ಪರಿಹಾರೋಪಾಯ ರೂಪದಲ್ಲಿ ಆಯಾ ಇಲಾಖೆಗಳಿಗೆ ನಿಗದಿತ ಅನುದಾನದಲ್ಲಿ ಕಡಿತ ಮಾಡಿರುವುದನ್ನು ಅಧಿಕೃತ ಅಂಕಿ-ಅಂಶಗಳು ಸಾರುತ್ತವೆ.

    ಜನ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುವ ಇಲಾಖೆಗಳಿಗೆ ಕಳೆದ ವರ್ಷದ ಅಕ್ಟೋಬರ್ ವರೆಗೆ 16,207.51 ಕೋಟಿ ರೂ. ನೀಡಲಾಗಿತ್ತು. ಪ್ರಸಕ್ತ ವರ್ಷ 7,091.06 ಕೋಟಿ ರೂ. ಬಿಡುಗಡೆ ಮಾಡಿದ್ದು, ಒಟ್ಟಾರೆ 9,000 ಕೋಟಿ ರೂ. ಖೋತಾ ಆಗಿದೆ.

    ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ತಕ್ಕಂತೆ ಕ್ರಮೇಣ ನಿಗದಿತ ಅನುದಾನ ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದರೂ ಪ್ರಸಕ್ತ ಹಣಕಾಸು ವರ್ಷಕ್ಕೆ ಕೈಗೂಡುವ ಲಕ್ಷಣಗಳಿಲ್ಲ.

    ಸಮಾಜ ಕಲ್ಯಾಣ, ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಇಲಾಖೆಗಳಿಗೆ ಹೆಚ್ಚಿನ ಕಡಿತದ ಹೊರೆ ಬಿದ್ದಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡುತ್ತಿದ್ದ ವೇತನವನ್ನು ಪರಿಷ್ಕರಿಸಿ, ಆರ್ಥಿಕ ಮುಗ್ಗಟ್ಟು ಸರಿದೂಗಿಸುವ ಕಸರತ್ತು ನಡೆಸಲಾಗಿದೆ.

    ಪಿಎಚ್.ಡಿ. ವಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾಸಿಕ ನಿರ್ವಹಣಾ ವೆಚ್ಚವನ್ನು 25,000 ರಿಂದ 8,250 ರೂ.ಗಳಿಗೆ ಇಳಿಸಲಾಗಿದೆ. ಮೆಟ್ರಿಕ್ ನಂತರದ ಎಸ್ಸಿ ವಿದ್ಯಾರ್ಥಿಗಳ ವೇತನ ಮೊತ್ತ 7,125 ರಿಂದ 2,926.82 ಕೋಟಿ ರೂ.ಗಳಿಗೆ ತಗ್ಗಿಸಲಾಗಿದೆ.

    ಹಾಗೆಯೆ ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವೇತನಕ್ಕೆ ನೀಡುತ್ತಿದ್ದ ಅನುದಾನ ಪ್ರಮಾಣವು 2,500 ಕೋಟಿ ರೂ.ಗಳಿಂದ 1,360 ಕೋಟಿ ರೂ. ಇಳಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts