ನಾಳೆ ಪ್ರತಿಷ್ಠಿತ ಮ್ಯಾಮ್ಕೋಸ್ ಚುನಾವಣೆ

Mamcos
ಅಂತ್ಯ ಸಂಸ್ಕಾರ ಸಹಾಯಧನ ಮರುಜಾರಿಗೊಳಿಸಿ
Published on

ಶಿವಮೊಗ್ಗ: ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಪ್ರತಿಷ್ಠಿತ ಮ್ಯಾಮ್ಕೋಸ್ (ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ) ಆಡಳಿತ ಮಂಡಳಿಗೆ ಫೆ.4ರಂದು ಚುನಾವಣೆ ನಡೆಯಲಿದೆ. 19 ನಿರ್ದೇಶಕ ಸ್ಥಾನಗಳಿಗೆ ಒಟ್ಟು 39 ಮಂದಿ ಅಖಾಡದಲ್ಲಿದ್ದು, ಇವರೆಲ್ಲರ ಸೋಲು-ಗೆಲುವು ಫೆ.5ರ ಬೆಳಗ್ಗೆ ಸೂರ್ಯೋದಕ್ಕೂ ಮುನ್ನ ಘೋಷಣೆಯಾಗಲಿದೆ.

11,580 ಸದಸ್ಯರು ಮತ ಚಲಾಯಿಸುವ ಅವಕಾಶ ಹೊಂದಿದ್ದು, 4ರ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣೆಗೆರೆ ಜಿಲ್ಲೆಗಳ ಒಟ್ಟು 9 ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಸಂಜೆ 4ರ ಬಳಿಕ ಎಲ್ಲ ಮತದಾನ ಕೇಂದ್ರಗಳಿಂದ ಮತ ಪೆಟ್ಟಿಗೆಗಳನ್ನು ಮ್ಯಾಮ್ಕೋಸ್ ಕೇಂದ್ರ ಕಚೇರಿ ಸಭಾಂಗಣಕ್ಕೆ ತರಲಾಗುತ್ತದೆ. ರಾತ್ರಿ 8ಕ್ಕೆ ಮತ ಎಣಿಕೆ ಆರಂಭವಾಗಲಿದೆ.

ಮ್ಯಾಮ್ಕೋಸ್‌ನಲ್ಲಿ ಬಿಗಿ ಹಿಡಿತ ಸಾಧಿಸಿರುವ ಸಹಕಾರ ಭಾರತಿ ತಂಡಕ್ಕೆ ಈ ಬಾರಿಯೂ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದ ಸಿಂಡಿಕೇಟ್ ಪೈಪೋಟಿ ನೀಡುವ ಹವಣಿಕೆಯಲ್ಲಿದೆ. ಎರಡೂ ತಂಡಗಳಿಂದ ತಲಾ 19 ಮಂದಿ ಚುನಾವಣಾ ಕಣದಲ್ಲಿದ್ದಾರೆ. ಈ ಎರಡೂ ತಂಡಗಳ ನಡುವೆ ಶಿವಮೊಗ್ಗ ತಾಲೂಕು ಹಾರನಹಳ್ಳಿಯ ಕೆ.ರುದ್ರೇಶಪ್ಪ ಎಂಬುವವರು ಸ್ವತಂತ್ರವಾಗಿ ಕಣದಲ್ಲಿ ಉಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net