

ಬೆಂಗಳೂರು: ಬಿಜೆಪಿಯನ್ನು ಗುರಿಯಾಗಿಸಿ ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆ ಮಾಡದೇ ತಡ ಹಿಡಿದಿರುವುದು ಸರಿಯಾದ ಕ್ರಮವಾದರೂ, ಈ ತೀರ್ಮಾನದಿಂದ ನಮ್ಮ ಕ್ಷೇತ್ರಗಳಲ್ಲಿ ಅಥವಾ ನಮ್ಮ ಪರವಾದ ಗುತ್ತಿಗೆದಾರರೂ ಸಮಸ್ಯೆ ಎದುರಿಸುವಂತಾಗಿದೆ ಎಂಬ ಅಭಿಪ್ರಾಯ ಗುರುವಾರ ನಡೆದ ಸಂಪುಟ ಸಭೆಯಲ್ಲಿ ವ್ಯಕ್ತವಾಗಿದೆ.
ಒಬ್ಬ ಸಚಿವರು ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆ ಮಾಡುವುದು ಸೂಕ್ತ, ಕೂಡಲೇ ಕ್ರಮಕೈಗೊಳ್ಳಿ ಎಂದು ಎಂದು ವಾದ ಮಂಡಿಸಿದ್ದಾಗಿ ತಿಳಿದುಬಂದಿದೆ. ಗುತ್ತಿಗೆದಾರರ ವಿಚಾರವನ್ನು ನಾವು ಚುನಾವಣೆಯಲ್ಲಿ ಬಳಸಿಕೊಂಡಿದ್ದೇವೆ . ಈಗ ನಾವು ಅವರಿಗೆ ಸ್ಪಂದಿಸದೇ ಹೋದರೆ ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರಬಹುದು. ಈ ವಿಷಯ ಇನ್ನಷ್ಟು ಹಿಗ್ಗಲು ಕಾರಣವಾಗಬಹುದು. ಕನಿಷ್ಠ ನಮ್ಮ ಪಕ್ಷದ ಪರವಾಗಿರುವ ಗುತ್ತಿಗೆದಾರನ್ನು ಗುರುತಿಸಿ ಹಣ ಬಿಡುಗಡೆ ಮಾಡುವ ಕೆಲಸ ಮಾಡುವಂತೆ ಸಂಪುಟ ಸದಸ್ಯರೊಬ್ಬರು ಸಲಹೆ ನೀಡಿದ್ದಾರೆನ್ನಲಾಗಿದೆ.