ಪುತ್ತೂರು: ಅಪ್ರಾಪ್ತ ಬಾಲಕನಿದ್ದಾಗ ಘಟನೆಯನ್ನು ಮುಚ್ಚಿಟ್ಟು, ಪ್ರಾಯಕ್ಕೆ ಬಂದಾಗ ವಿವಾಹ ಮಾಡುವುದಿಲ್ಲ ಎಂಬುದಕ್ಕೆ ಪ್ರತಿಕ್ರಿಯೆ ನೀಡುವುದು ಕಷ್ಟಕರ. ಇಬ್ಬರೂ ಒಂದಾಗಿ ಮಗುವಿಗೆ ತಾಯಿ ತಂದೆಯ ಪ್ರೀತಿ ಸಿಗಬೇಕು. ಎರಡು ಮನಸ್ಸುಗಳನ್ನು ಒಂದು ಮಾಡುವುದು ನಡೆಯಬೇಕು. ಸಮಾಜ ಸಂಘಟಿತವಾಗಿ ಸ್ಪಂದಿಸಬೇಕೆಂಬ ನಿಟ್ಟಿನಲ್ಲಿ ಆಗಮಿಸಿದ್ದೇನೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕೆ.ಪಿ.ನಂಜುಂಡಿ ಹೇಳಿದರು.
ಭವಿಷ್ಯದ ಬಗ್ಗೆ ಅರಿವಿಲ್ಲದೆ, ಜೀವನವನ್ನು ಹುಡುಗಾಟಿಕೆಯಿಂದ ತೆಗೆದುಕೊಂಡಾಗ ಸಮಾಜವೂ ತಲೆತಗ್ಗಿಸಬೇಕಾಗುತ್ತದೆ. ಯಾವ ಮನೆಯಲ್ಲೂ ಇಂತಹ ಸನ್ನಿವೇಶಗಳು ಬರಬಾರದು. ತಪ್ಪಾದಾಗ ಸರಿಪಡಿಸುವ ಮನಸ್ಸು ಎರಡು ಕಡೆಯಲ್ಲಿರಬೇಕು. ಹುಡುಗ ತಂದೆ, ಕುಟುಂಬ ಹಾಗೂ ಆತ್ಮೀಯ ಬಳಗದ ಜತೆಗೆ ಹುಡುಗನಲ್ಲಿಯೂ ಕೈಮುಗಿದು ಎಲ್ಲವನ್ನು ಒಪ್ಪಿಕೊಂಡು ಗಂಡ ಹೆಂಡತಿಯಾಗಿ ಬಾಳಬೇಕು ಎಂದು ವಿನಂತಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವಕರ್ಮ ಜಿಲ್ಲಾ ಒಕ್ಕೂಟ ಅಧ್ಯಕ್ಷ ಮಧು ಆಚಾರ್ಯ, ಸಂತ್ರಸ್ತೆಯ ತಾಯಿ ನಮಿತಾ, ಯುವತಿ ಚಿಕ್ಕಪ್ಪ ಹೇಮಚಂದ್ರ, ಮೈಸೂರು ಜಿಲ್ಲಾ ಸಂಘದ ಅಧ್ಯಕ್ಷ ರಿಷಿ ವಿಶ್ವಕರ್ಮ ಉಪಸ್ಥಿತರಿದ್ದರು.
ಹುಡುಗನನ್ನು ಕರೆದುಕೊಂಡು ಬಂದು ನಾವೇ ಮದುವೆ ಮಾಡಿಸುತ್ತೇವೆ. ಎರಡು ಕುಟುಂಬ ಒಂದಾಗಿರಲು ಏನೆಲ್ಲಾ ಬೇಕು ಹಿಂದೆ ನಿಂತು ಸಹಕಾರ ನೀಡುತ್ತೇವೆ. ಜೈಲಲ್ಲಿ ಇದ್ದು, ಸಾಧನೆ ಮಾಡುವುದು ಏನಿದೆ. ಆಯಸ್ಸು, ಭವಿಷ್ಯ ಹೋಗುತ್ತದೆ. ಇದೆಲ್ಲವನ್ನೂ ಆಲೋಚನೆ ಮಾಡಿ ಮನಸ್ಸು ಬದಲಾಯಿಸಿಕೊಂಡು, ಪ್ರತಿಷ್ಠೆಯನ್ನು ಮುಂದುವರಿಸದೆ, ಮನೆ ತುಂಬಿಸಬೇಕು.
| ಕೆ.ಪಿ.ನಂಜುಂಡಿ ವಿಧಾನಪರಿಷತ್ ಮಾಜಿ ಸದಸ್ಯ